Sunday, July 14, 2024
Homeಅಂತಾರಾಷ್ಟ್ರೀಯಪಪುವಾ ನ್ಯೂಗಿನಿಯಲ್ಲಿ ಭಾರೀ ಭೂ ಕುಸಿತ: 100ಕ್ಕೂ ಹೆಚ್ಚು ಮಂದಿ ಸಾವು

ಪಪುವಾ ನ್ಯೂಗಿನಿಯಲ್ಲಿ ಭಾರೀ ಭೂ ಕುಸಿತ: 100ಕ್ಕೂ ಹೆಚ್ಚು ಮಂದಿ ಸಾವು

ಮೆಲ್ಬರ್ನ್: ಪಪುವಾ ನ್ಯೂಗಿನಿಯಲ್ಲಿ ಸಂಭವಿಸಿದ ಭಾರೀ ಭೂ ಕುಸಿತದಲ್ಲಿ ನೂರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಎಂಗಾ ಪ್ರಾಂತ್ಯದ ಕಾವೊಕಲಂ ಗ್ರಾಮದಲ್ಲಿ ನಡೆದ ಈ ದುರ್ಘಟನೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಬೆಳಿಗ್ಗೆ 3 ಗಂಟೆಗೆ ಭೂ ಕುಸಿತ ಸಂಭವಿಸಿದೆ. ಸಾವಿನ ಸಂಖ್ಯೆ ಕುರಿತು ಅಧಿಕಾರಿಗಳು ದೃಢಪಡಿಸಿಲ್ಲ. ನೆಲದಲ್ಲಿ ಹೂತು ಹೋಗಿರುವ ಶವಗಳನ್ನು ಜನರು ಮೇಲಕ್ಕೆತ್ತುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಪಪುವಾ ನ್ಯೂಗಿನಿ ರಾಷ್ಟ್ರದಲ್ಲಿ 1 ಕೋಟಿಗೂ ಹೆಚ್ಚು ಜನಸಂಖ್ಯೆಯಿದೆ. 2.7 ಕೋಟಿ ಜನಸಂಖ್ಯೆ ಇರುವ ಆಸ್ಟ್ರೇಲಿಯಾವನ್ನು ಹೊರತುಪಡಿಸಿ ಅತಿಹೆಚ್ಚು ಜನಸಂಖ್್ಯೆ ಹೊಂದಿರುವ ದಕ್ಷಿಣ ಪೆಸಿಫಿಕ್ ರಾಷ್ಟ್ರ ಇದು.

RELATED ARTICLES
- Advertisment -
Google search engine

Most Popular