ದಾವಣಗೆರೆ-ನವಂಬರ್,
ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಆಲೂರಂ ತಾಲ್ಲೂಕಿನ ಪರಿಸರವಾದಿ, ಸಮಾಜ ಸೇವಕರ್ತ, ಕನ್ನಡ
ಭಾಷೆಯನ್ನು ತೆಲುಗು ನಾಡಿನಲ್ಲಿ ವೈಭವೀಕರಿಸುವ ಕನ್ನಡಾಭಿಮಾನಿ, ಹೋರಾಟಗಾರರಾದ ಪರಸಲ
ಉಮೇಶ್‌ರವರನ್ನು ಅವರ ನಿರಂತರ ಕಠಿಣ ಪರಿಶ್ರಮದ ಸಾಧನೆಗಳನ್ನು ಗುರುತಿಸಿ ದಾವಣಗೆರೆಯ ಕಲಾಕುಂಚ
ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಕರ್ನಾಟಕದ 69ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ “ಕರ್ನಾಟಕ ಮುಕುಟ ಮಣಿ” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಡಿಸೆಂಬರ್ 1 ರಂದು ಭಾನುವಾರ ನಗರದ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಕಲ್ಯಾಣ ಮಂಟಪದ ಸಭಾಂಗಣದ ಭವ್ಯ ದಿವ್ಯ ವೇದಿಕೆಯಲ್ಲಿ ಈ ಪ್ರಶಸ್ತಿಗೆ ಭಾಜನರಾದ ಪರಸಲ ಉಮೇಶ್‌ರವರಿಗೆ ಕಲಾಕುಂಚ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸರ್ವ ಸದಸ್ಯರು ಅಭಿಮಾನದಿಂದ ಅಭಿನಂದಿಸಿ
ಶುಭ ಕೋರಿದ್ದಾರೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಪ್ರಕಟಿಸಿದ್ದಾರೆ.