ಜುಲೈ 19-07-2025ರ ಶನಿವಾರ ಮಧ್ಯಾಹ್ನ 01-00 ರಿಂದ ಭಗವತೀ ಶಾಲೆಯ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮನ್ನು ಭಗವತೀ ಶಾಲೆಯ ಆಡಳಿತ ಮಂಡಳಿಯ ಅದ್ಯಕ್ಷರಾದ ದಿನಕರ್ ಉಳ್ಳಾಲ್ ಮತ್ತು ಟ್ರಸ್ಟಿ ಸದಾಶಿವ ಉಳ್ಳಾಲ್ ಇವರು ದೀಪ ಪ್ರಜ್ವಲಿಸಿ ಉದ್ಘಾಟನೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ 2024-25 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಕುಮಾರಿ ಮೇಧ.ಜೆ.ಬಿ,ಕುಮಾರಿ ವರ್ಷಿಣಿ ರೈ,ಕುಮಾರಿ ತೇಜಸ್ವಿನಿ.ವಿ.ವೈ,ಕುಮಾರಿ ಹಿರಾಲ್.ಎಸ್.ಬಂಗೇರ ಇವರನ್ನು ಅಭಿನಂದಿಸಲಾಯಿತು. ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ರಾಘವ ಉಚ್ಚಿಲ್, ಕೋಶಾಧಿಕಾರಿ ಮಾಧವ ತಲಪಾಡಿ ಟ್ರಸ್ಟಿ ಗಜಲಕ್ಷ್ಮಿ,ಭಗವತೀ ಶಾಲೆಯ ಮುಖ್ಯ ಶಿಕ್ಷಕರದ ಪ್ರಮೀಳಾ ಶಾಂತರಾಮ್, ಭಗವತೀ ಶಾಲೆಯ ಪೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ರಕ್ಷಕ ಶಿಕ್ಷಕ ಸಮಿತಿಯ ಅದ್ಯಕ್ಷರಾದ ಸುನೀತ ಮತ್ತು ಅಮೃತ ಶೆಟ್ಟಿ ಉಪಸ್ಥಿತಿ ಇದ್ದರು.
ಸದಸ್ಯರ ಮನೆಯವರು ಸಿದ್ಧ ಪಡಿಸಿರುವ ಆಟಿ ತಿಂಗಳ ಸುಮಾರು35 ಬಗೆಯ ವಿವಿಧ ಆಹಾರ ಪದಾರ್ಥಗಳನ್ನು ಎಲ್ಲರೂ ಸವಿದರು. ಕಾರ್ಯಕ್ರಮದಲ್ಲಿ ಸದಸ್ಯರಾದ ಸುಮ, ಕವಿತ ಸುರೇಶ್,ಕವಿತ ಶೆಟ್ಟಿ, ಪ್ರಪುಲ್ಲ, ಲಕ್ಷ್ಮಿಹರೀಶ್, ವನಿತ, ಸುಷ್ಮಾ ಸಾಲಿಯಾನ್, ರೂಪ ಹೆಗ್ಡೆ,ಚಿತ್ರಲೇಖಾ, ಲಕ್ಷ್ಮೀ ಶೆಣೈ, ಅಕ್ಷಿತ, ಸ್ವಾತಿ, ಜ್ಯೋತಿ, ಅನಿತ, ಶಿಲ್ಪಸುವರ್ಣ, ವಿಭಾ, ಮೋಹಿನಿ, ಸ್ವಾತಿ, ಅಶ್ವಿನಿ, ಪದ್ಮಿನಿ, ಕುಶಲ, ಸುವ್ಯ ಶೆಟ್ಟಿ, ಸಬಿತ, ಜಯಲಕ್ಷ್ಮಿ, ಜ್ಯೋತಿ, ಸೌಮ್ಯ, ಚಿತ್ರ,ರವಿಕಿರಣ್, ಸುದರ್ಶನ್ ಬಂಗೇರ, ಶಶಿಧರ್ ಕೊಂಡಾಣ, ಉಪಸ್ಥಿತಿ ಇದ್ದರೂ. ರಕ್ಷಕ ಶಿಕ್ಷಕ ಪ್ರಾಥಮಿಕ ವಿಭಾಗದ ಉಪಾಧ್ಯಕ್ಷರಾದ ಪ್ರವೀಣ್ ಬಸ್ತಿ ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಣೆ ಮಾಡಿದರು.