Tuesday, April 22, 2025
Homeಬೆಳ್ತಂಗಡಿಮಾರ್ಚ್ 27ರಂದು ಮೊಗ್ರು ಗ್ರಾಮದಲ್ಲಿ ಪೋಷಕರ ಹಾಗೂ ಶಿಕ್ಷಕರ ಚಿಂತನಾ ಸಭೆ

ಮಾರ್ಚ್ 27ರಂದು ಮೊಗ್ರು ಗ್ರಾಮದಲ್ಲಿ ಪೋಷಕರ ಹಾಗೂ ಶಿಕ್ಷಕರ ಚಿಂತನಾ ಸಭೆ

ಮೊಗ್ರು : ಮಾ 27 ಮೊಗ್ರು ಗ್ರಾಮದ ಮುಗೇರಡ್ಕ – ಅಲೆಕ್ಕಿ ಶ್ರೀ ರಾಮ ಸೇವಾ ಟ್ರಸ್ಟ್ (ರಿ.)ಇದರ ಪೋಷಕರ ಹಾಗೂ ಶಿಕ್ಷಕರ ಚಿಂತನಾ ಸಭೆ ಮಾರ್ಚ್ 27 ರಂದು ಶಿಶುಮಂದಿರ ವಠಾರದಲ್ಲಿ ಜರುಗಿತು.

ಉದಯ ಭಟ್ ಇವರು ಸಭಾಧ್ಯಕ್ಷತೆ ವಹಿಸಿದ್ದರು. ಅಲೆಕ್ಕಿ ಶ್ರೀರಾಮ ಸೇವಾ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ರಮೇಶ್.ಎನ್, ಸಂಚಾಲಕರಾದ ಅಶೋಕ್, ಎನ್ , ಶಿಶುಮಂದಿರದ ಹಿರಿಯ ವಿದ್ಯಾರ್ಥಿಗಳು, ಪೋಷಕರು, ಮಾತಾಜಿಯವರು, ಮಾತೃ ಮಂಡಳಿ, ಹಾಗೂ ಜೈ ಶ್ರೀರಾಮ್ ಮಹಿಳಾ ಸಂಘ ಅಲೆಕ್ಕಿ ಮುಗೇರಡ್ಕ ಇದರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಶಿಶುಮಂದಿರದಿಂದ ಮುಂದಿನ ಶೈಕ್ಷಣಿಕ ತರಗತಿಗೆ ತೆರಳುತ್ತಿರುವ ಚಿಣ್ಣರಿಗೆ ನೆನಪಿನ ಕಾಣಿಕೆ ನೀಡಿ, ಮುಂದಿನ ಭವಿಷ್ಯ ಉತ್ತಮವಾಗಿರಲೆಂದು ಹರಸಿ ಹಾರೈಸಿ ಪ್ರೀತಿಯಿಂದ ಬೀಳ್ಕೊಳ್ಳಲಾಯಿತು.

ಪ್ರಸವಕ್ಕಾಗಿ ತೆರಳುತ್ತಿರುವ ಶಿಶು ಮಂದಿರದ ಗೀತಾ ಮಾತಾಜಿ ಮತ್ತು ನವ್ಯ ಮಾತಾಜಿ ಯವರಿಗೆ ಸುಖ ಪ್ರಸವಕ್ಕಾಗಿ ಶುಭಕೋರಿದ ಸಮಿತಿ ಮತ್ತು ಮಾತೆಯರು ಬಾಗಿನ ನೀಡಿ ಹರಸಿದರು. ಸಭೆಯಲ್ಲಿ ಹೆತ್ತವರ ಮಹತ್ವ ತಿಳಿಸಿ, ಅವರನ್ನು ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಯಿತು. ಶಿಶು ಮಂದಿರದ ಅನ್ನದಾಸೋಹದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಹಕರಿಸುತ್ತಿರುವ ದಾನಿಗಳಾದ ಧರ್ಣಪ್ಪ ಗೌಡ ನಿರುoಬುಡ, ಸರಿತಾ ನಿರುoಬುಡ,ಗಿರಿಧರ ಗೌಡ ನಿರುoಬುಡ ಇವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

1 ನೇ ತರಗತಿಯ ವಿದ್ಯಾಭ್ಯಾಸಕ್ಕಾಗಿ ತೆರಳುತ್ತಿರುವ ಮಕ್ಕಳ ಪೋಷಕರು ಶಿಶುಮಂದಿರಕ್ಕೆ ಗೋಡ್ರೇಜ್ ನ್ನು ಕೊಡುಗೆಯಾಗಿ ನೀಡಿದರು. 2024-25 ನೇ ಸಾಲಿನ ಮಾತೃ ಮಂಡಳಿಯ ಪದಾಧಿಕಾರಿಗಳು ಶಿಶುಮಂದಿರಕ್ಕೆ ದೀಪ ವನ್ನು ಉಡುಗೊರೆಯಾಗಿ ನೀಡಿದರು. ನೆರೆದವರೆಲ್ಲರಿಗೂ ಉಪಾಹಾರದೊಂದಿಗೆ ಸಿಹಿ ತಿಂಡಿಯ ವ್ಯವಸ್ಥೆ ಮಾಡಿದರು. ಪುಷ್ಪಲತಾ ಮಾತಾಜಿಯವರು ಸ್ವಾಗತಿಸಿ,ನಿರೂಪಿಸಿದರು. ಸಮಿತಿಯ ಸದಸ್ಯರಾದ ಭರತೇಶ್ ಪುಣ್ಕೆದಡಿಯವರು ಧನ್ಯವಾದವಿತ್ತರು.

RELATED ARTICLES
- Advertisment -
Google search engine

Most Popular