ನಾಲ್ಕು ದಿನಗಳ ನವಜಾತ ಶಿಶುವನ್ನು ಎಸೆದು ಹೋದ ಪೋಷಕರು

0
686

ಚಿತ್ರದುರ್ಗ : ನಾಲ್ಕು ದಿನಗಳ ನವಜಾತ ಶಿಶುವನ್ನು ಪೋಷಕರು ಆಸ್ಪತ್ರೆಯ ಆವರಣದಲ್ಲಿಯೇ ಎಸೆದು ಹೋಗಿರುವ ಅಮಾನವೀಯ ಘಟನೆ ಹಿರಿಯೂರಿನ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

ಮಗು ಮೃತಪಟ್ಟಿದ್ದು, ಪೋಷಕರು ಎಸೆದ ನಂತರ ಸಾವನ್ನಪ್ಪಿದೆಯೇ ಅಥವಾ ಸತ್ತ ಶಿಶುವನ್ನು ಎಸೆದು ಹೋಗಿದ್ದಾರೆಯೇ ಎಂದು ಇನ್ನೂ ತಿಳಿದುಬಂದಿಲ್ಲ.

ಆಸ್ಪತ್ರೆಯ ಹಿಂದಿರುವ ಶೌಚಾಲಯದ ಬಳಿ ಮಗುವನ್ನು ಎಸೆದು ಹೋಗಿದ್ದು, ಶೌಚಾಲಯಕ್ಕೆ ಸ್ಥಳೀಯರು ಹೋಗುವಾಗ ಈ ಮಗು ಕಂಡುಬಂದಿದೆ. ಸಾರ್ವಜನಿಕರೊಬ್ಬರು ಈ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು , ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸದ್ಯ ಹಿರಿಯೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here