ಉಡುಪಿ: ಫೆ 15, ಪರ್ಕಳ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ 27 ರಿಂದ ಮೇ 11 ರ ವರೆಗೆ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವ ನೆರವೇರಲಿದೆ.
27 ರಂದು ಹೊರೆಕಾಣಿಕೆ, ಮೇ 1 ರಂದು ಪುನಃಪ್ರತಿಷ್ಠೆ ಮೇ 4 ರಂದು ಬ್ರಹ್ಮಕಲಶ ನಡೆಯಲಿದೆ. ಶ್ರೀ ಮಹಾಗಣಪತಿ ಗರ್ಭಗುಡಿಗೆ ಹಳೇ ಗರ್ಭಗುಡಿಯ ಕಂಬ ಬಳಸಿಕೊಂಡು ಗೋಡೆಗಳನ್ನು ಕೆಂಪುಕಲ್ಲಿಗೆ ಕುಸುರಿ ಕೆತ್ತನೆಯಿಂದ ನಿರ್ಮಿಸಲಾಗಿದ್ದು, ಮಾಡಿಗೆ ತಾಮ್ರದ ತಗಡು ಹೊದಿಸಲಾಗಿದೆ. ಇದು ಶ್ರೀ ಮಹಾಲಿಂಗೇಶ್ವರ
ದೇವರ ಗರ್ಭಗುಡಿಯ ದಕ್ಷಿಣ ಭಾಗದಲ್ಲಿ ಪಶ್ಚಿಮ ಮುಖವಾಗಿದ್ದು ಕಾರಣಿಕತೆಯಿಂದ ಕೂಡಿದೆ.
ಸುತ್ತುಪೌಳಿಯನ್ನು ಪುನಃ ನಿರ್ಮಿಸ ಲಾಗಿದ್ದು, ಇದಕ್ಕೆ ಭಕ್ತರು ಕರಸೇವೆ ಮಾಡಿದ್ದಾರೆ. ಇಲ್ಲಿನ ಪೌಳಿಯ ನೆಲ, ಅಂಗಣಕ್ಕೆ ಗ್ರಾನೈಟ್ ಹಾಕಲಾಗುವುದು. ಮಾಡಿಗೆ ಹೆಂಚು ಹೊದಿಸಲಾಗಿದೆ. ತೀರ್ಥ ಬಾವಿಯನ್ನು ಸಂಪೂರ್ಣ ಶಿಲಾಮಯಗೊಳಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಆತ್ರಾಡಿ ತಿಳಿಸಿದ್ದಾರೆ.