Wednesday, July 24, 2024
Homeಅಂತಾರಾಷ್ಟ್ರೀಯಪ್ರಯಾಣಿಕರನ್ನು ಹೊತ್ತೊಯ್ಯುವ ಡ್ರೋನ್ ಹಾರಾಟ ಪ್ರಯೋಗ ಯಶಸ್ವಿ

ಪ್ರಯಾಣಿಕರನ್ನು ಹೊತ್ತೊಯ್ಯುವ ಡ್ರೋನ್ ಹಾರಾಟ ಪ್ರಯೋಗ ಯಶಸ್ವಿ

ಅಬುಧಾಬಿ: ಪ್ರಯಾಣಿಕರನ್ನು ಹೊತ್ತೊಯ್ಯುವ ಮೊದಲ ಡ್ರೋನ್ ಪ್ರಯೋಗ ಅಬುಧಾಬಿಯಲ್ಲಿ ಯಶಸ್ವಿಯಾಗಿದೆ. ಅಬುಧಾಬಿ ಮೊಬಿಲಿಟಿ ವೀಕ್ ನಲ್ಲಿ ಮಲ್ಟಿ ಲೆವೆಲ್ ಗ್ರೂಪ್, ಫಿನ್ ಟೆಕ್ ಸಹಯೋಗದೊಂದಿಗೆ ಡ್ರೋನ್ ಗಳ ಪ್ರಯೋಗ ನಡೆಯಿತು. ಅವುಗಳಲ್ಲಿ ಎರಡು ಡ್ರೋನ್ ಗಳಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುವ ಪ್ರಯೋಗ ಯಶಸ್ವಿಗೊಳಿಸಲಾಯಿತು.

350 ಕೆಜಿ ಪೇಲೋಡ್ ನೊಂದಿಗೆ ಐದು ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಡ್ರೋನ್ ಮೊದಲ ಪ್ರಯೋಗದಲ್ಲಿ ಪಾಲ್ಗೊಂಡಿತ್ತು. ಎರಡನೇ ಪ್ರಯೋಗದಲ್ಲಿ ಗಾತ್ರದಲ್ಲಿ ಸಣ್ಣ ಗಾತ್ರದ ಡ್ರೋನ್ ಹಾರಿಸಲಾಯಿತು. ಈ ಡ್ರೋನ್ 20 ನಿಮಿಷಗಳಲ್ಲಿ 35 ಕಿ.ಮೀ. ದೂರ ಇಬ್ಬರು ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಐದು ಆಸನಗಳ ಡ್ರೋನ್ 123 ಕಿ.ಮೀ. ವಿಸ್ತಾರವಾದ ಪ್ರದೇಶದಲ್ಲಿ 40 ನಿಮಿಷ ಹಾರಾಟ ನಡೆಸಿದೆ. ಡ್ರೋನ್ ಹಾರಾಟದಲ್ಲೇ ಇದು ದಾಖಲೆಯ ಹಾರಾಟವಾಗಿದೆ.  

RELATED ARTICLES
- Advertisment -
Google search engine

Most Popular