Saturday, December 14, 2024
Homeಮಂಗಳೂರುಶನಿ ಮಹಾತ್ಮೆ" ನಾಟಕದಲ್ಲಿ ಪಟ್ಲ ಸತೀಶ್ ಶೆಟ್ಟಿಯವರ ಸ್ವರ ಮಾಧುರ್ಯ

ಶನಿ ಮಹಾತ್ಮೆ” ನಾಟಕದಲ್ಲಿ ಪಟ್ಲ ಸತೀಶ್ ಶೆಟ್ಟಿಯವರ ಸ್ವರ ಮಾಧುರ್ಯ

ಯಕ್ಷಗಾನವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದು ಅದಕ್ಕೊಂದು ವಿಶೇಷ ಗೌರವದ ಸ್ಥಾನಮಾನ ದೊರಕಿಸಿ ಕೊಟ್ಟಿರುವ ಪಟ್ಲ ಸತೀಶ ಶೆಟ್ಟರು ತನ್ನ ಅದ್ಭುತ ಕಂಠಸಿರಿಯಿಂದ ಎಲ್ಲರನ್ನು ಮಂತ್ರಮುಕ್ತಗೊಳಿಸುವವರು. ಅವರ ಹಾಡುಗಳಿಗೆ ಪ್ರೇಕ್ಷಕರಿಂದ ಸಿಗುವ ಮೆಚ್ಚುಗೆಯ ಕಾರತಾಡನ, ಅವರ ಹಾಡುಗಳನ್ನು ಕೇಳಿಸಿಕೊಳ್ಳಲು ತೋರುವ ಉತ್ಸಾಹ ಹೀಗೆ ಎಲ್ಲವೂ ಪಟ್ಲ ಎಂಬ ಪ್ರತಿಭಾ ಪ್ರಭೆಗೆ ಸಾಕ್ಷಿ.
ಪಟ್ಲ ಸತೀಶ್ ಶೆಟ್ಟರು ಕೇವಲ ಯಕ್ಷಗಾನಗಳಿಗೆ ಮಾತ್ರವಲ್ಲ , ಸಿನಿಮಾ, ನಾಟಕಗಳಿಗೂ ಯಕ್ಷಗಾನೀಯ ಶೈಲಿಯ ಹಾಡುಗಳನ್ನು ನೀಡಿದ್ದಾರೆ. ಅವರ ಹಾಡೊಂದಿದ್ದರೆ ಆ ಸಿನಿಮಾ, ನಾಟಕಕ್ಕೆ ಹೊಸ ಲುಕ್ ಶಕ್ತಿ ಸಿಗುತ್ತದೆ ಆದ್ದರಿಂದಲೇ ನಿರ್ಮಾಪಕರು, ನಿರ್ದೇಶಕರು ಅವರದೊಂದು ಹಾಡಿಗೆ ಮುಗಿಬಿದ್ದು ಬೇಡಿಕೆ ಇರಿಸುತ್ತಾರೆ. ಅವರ ಹಾಡನ್ನು ಒಳಗೊಂಡ ಸಿನಿಮಾ ನಾಟಕಗಳು ಸೋತದ್ದೇ ಇಲ್ಲ. ನಾಟಕ ರಂಗಗಳಲ್ಲಿ ಹೊಸ ದಾಖಲೆ ಬರೆದಿರುವ, ಇನ್ನೂ ಎಲ್ಲೆಡೆಯಿಂದ ಬೇಡಿಕೆ ಉಳಿಸಿಕೊಂಡಿರುವ “ಶಿವದೂತೆ ಗುಳಿಗೆ” ನಾಟಕದಲ್ಲೂ ಪಟ್ಲ ಸತೀಶ ಶೆಟ್ಟರ ಹಾಡಿದೆ. ಈಗಿನ ಹೊಸ ಸುದ್ದಿ ಏನೆಂದರೆ ಕಿಶೋರ್ ಡಿ ಶೆಟ್ಟಿ ಅವರ ಶ್ರೀ ಲಲಿತೆ ಕಲಾವಿದರು ತಂಡದ “ಶನಿ ಮಹಾತ್ಮೆ” ನಾಟಕದಲ್ಲಿ ಪಟ್ಲ ಸತೀಶ ಶೆಟ್ಟರ ಒಂದು ಅದ್ಭುತ ಹಾಡಿದೆ. ಆ ನಾಟಕದ ಪ್ರಥಮ ಪ್ರದರ್ಶನ ನವಂಬರ್ 10 ರಂದು ಭಾನುವಾರ ಸಂಜೆ 4.30 ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ಪ್ರದರ್ಶನಗೊಳ್ಳಲಿದೆ. ನಾಟಕದ ರಿಹರ್ಸಲ್ ಭರ್ಜರಿಯಾಗಿಯೆ ನಡೆಯುತ್ತಿದೆ. ಪಟ್ಲರ ಹಾಡು ಕೂಡ ಸೇರಿ ಶನಿ ಮಹಾತ್ಮೆ ನಾಟಕ ಪ್ರೇಕ್ಷಕರ ಮನೆಗೆಲ್ಲುವಲ್ಲಿ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಕಲಾ ಪ್ರೇಕ್ಷಕರದ್ದು. ಪಟ್ಲರು ಹಾಡಿದ ಹಾಡು ಜನಪ್ರಿಯವಾಗಿದೆ. ಇವರಲ್ಲದೆ ರಮೇಶ್ಚಂದ್ರ, ಗುರುರಾಜ್, ರವೀಂದ್ರ ಪ್ರಭು, ಪಲ್ಲವಿಪ್ರಭು ಅವರ ಸ್ವರಮಾಧುರ್ಯವೂ ಇದೆ.

RELATED ARTICLES
- Advertisment -
Google search engine

Most Popular