Saturday, June 14, 2025
Homeರಾಜ್ಯಕೋಟಿ ಮೌಲ್ಯದ ಕಾರು ಕೊಡಿಸದ್ದಕ್ಕೆ ಮಾತುಬಿಟ್ಟಿದ್ದ ಪವಿತ್ರಾ ಗೌಡ | ಕೋಪ ಶಮನಕ್ಕಾಗಿ ಸ್ವಾಮಿ ಕೊಲೆ?

ಕೋಟಿ ಮೌಲ್ಯದ ಕಾರು ಕೊಡಿಸದ್ದಕ್ಕೆ ಮಾತುಬಿಟ್ಟಿದ್ದ ಪವಿತ್ರಾ ಗೌಡ | ಕೋಪ ಶಮನಕ್ಕಾಗಿ ಸ್ವಾಮಿ ಕೊಲೆ?

ಬೆಂಗಳೂರು: ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ದರ್ಶನ್‌ ಅವರ ಆಪ್ತೆ ಪವಿತ್ರಾ ಗೌಡ ಅವರ ಮುನಿಸು ಶಮನ ಮಾಡಲು ರೇಣುಕಾಸ್ವಾಮಿ ಹತ್ಯೆ ನಡೆಯಿತಾ? ಎಂಬ ಮಾಹಿತಿ ಲಭ್ಯವಾಗಿದೆ.
ಕೋಟಿ ಮೌಲ್ಯದ ಕಾರು ಕೊಡಿಸುವ ವಿಚಾರವಾಗಿ ದರ್ಶನ್ ಮತ್ತು ಪವಿತ್ರಾ ಗೌಡ ನಡುವೆ ಮನಸ್ತಾಪವಾಗಿತ್ತು ಎನ್ನಲಾಗಿದೆ. ದರ್ಶನ್ ದುಬೈ ಟ್ರಿಪ್ ಮುಗಿಸುಕೊಂಡು ಬರುತ್ತಿದ್ದಂತೆ ಪವಿತ್ರಾ ಗೌಡ ಕೋಟಿ ಮೌಲ್ಯದ ಕಾರಿಗೆ ಬೇಡಿಕೆ ಇಟ್ಟಿದ್ದರಂತೆ. ಈ ವೇಳೆ ದರ್ಶನ್ ಕೋಟಿ ಕಾರು ಕೊಡಿಸುವುದಕ್ಕೆ ನಿರಾಕರಿಸಿದ್ದರು. ಸದ್ಯ ದೊಡ್ಡ ಅಮೌಂಟ್ ಇಲ್ಲ ಎಂಬ ಕಾರಣ ನೀಡಿ ಪವಿತ್ರಾ ಗೌಡಗೆ ಕೋಟಿ ಕಾರು ಕೊಡಿಸಿರಲಿಲ್ಲ ಎನ್ನಲಾಗಿದೆ.
ಈ ವಿಚಾರಕ್ಕಾಗಿ ಪವಿತ್ರಾ ಗೌಡ, ದರ್ಶನ್ ಜೊತೆ ಮಾತು ಬಿಟ್ಟಿದ್ದರು ಎನ್ನಲಾಗಿದೆ. ಸುಮಾರು ಒಂದು ತಿಂಗಳುಗಳ ಕಾಲ ದರ್ಶನ್ ಜೊತೆ ಪವಿತ್ರಾ ಗೌಡ ಮಾತನಾಡುತ್ತಿರಲಿಲ್ಲ ಎನ್ನಲಾಗಿದೆ. ಮಾತು ಬಿಟ್ಟಿದ್ದರ ನಡುವೆ ರೇಣುಕಾಸ್ವಾಮಿ ಮೆಸೇಜ್ ಘಟನೆ ನಡೆದಿರುತ್ತದೆ. ಮೆಸೇಜ್ ಕಥೆ ತಿಳಿದ ಬಳಿಕ ಈ ಸಮಸ್ಯೆಯನ್ನು ಸರಿಪಡಿಸಿದರೆ ನಾವಿಬ್ಬರು ಮತ್ತೆ ಹತ್ತಿರ ಆಗಬಹುದು ಎಂದು ನಂಬಿ ಕಿಡ್ನಾಪ್ ಪ್ರಹಸನ ನಡೆಸಿ ದರ್ಶನ್ ತಗ್ಲಾಕಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯೊಂದು ತಿಳಿಸಿದೆ.

RELATED ARTICLES
- Advertisment -
Google search engine

Most Popular