Monday, December 2, 2024
Homeಮಂಗಳೂರುಮಂಗಳೂರು | ಹೋರಾಟದ ಎಫೆಕ್ಟ್; ಪಾವೂರು ಉಳಿಯ ದ್ವೀಪದಲ್ಲಿ ಮರಳುಗಾರಿಕೆ ನಿಷೇಧ

ಮಂಗಳೂರು | ಹೋರಾಟದ ಎಫೆಕ್ಟ್; ಪಾವೂರು ಉಳಿಯ ದ್ವೀಪದಲ್ಲಿ ಮರಳುಗಾರಿಕೆ ನಿಷೇಧ

ಮಂಗಳೂರು: ಪಾವೂರು ಉಳಿಯ ಕುದ್ರು ದ್ವೀಪದ ಸುತ್ತಮುತ್ತಲಿನ 2 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮರಳುಗಾರಿಕೆಯನ್ನು ನಿಷೇಧಿಸಿ ಮಂಗಳೂರು ಉಪ ವಿಭಾಗಾಧಿಕಾಋಿ ಹರ್ಷವರ್ಧನ್‌ ಆದೇಶ ಹೊರಡಿಸಿದ್ದಾರೆ. ಈ ವ್ಯಾಪ್ತಿಯಲ್ಲಿ ಸಂಚಾರ ದೋಣಿಗಳ ಹೊರತಾಗಿ ಎಲ್ಲಾ ದೋಣಿ ಅಥವಾ ಯಂತ್ರಗಳ ಮೂಲಕ ಮರಳು ತೆಗೆಯುವ, ಸಾಗಾಟ, ಶೇಖರಣೆ ಮಾಡುವಂತಿಲ್ಲ. ಅಡ್ಯಾರು ಗ್ರಾಮದ ವಳಚ್ಚಿಲ್‌ ದಕ್ಕೆ, ಅಡ್ಯಾರು ಗ್ರಾಮದ ಸಹ್ಯಾದ್ರಿ ಇಂಜಿನಿಯರಿಂಗ್‌ ಕಾಲೇಜಿನ ಹಿಂಭಾಗದ ದಕ್ಕೆ, ನದಿಯ, ದ್ವೀಪದ ಎಡಭಾಗದಲ್ಲಿರುವ ಪಾವೂರು ದಕ್ಕೆ ಈ ನಿಷೇಧಿತ ಪ್ರದೇಶದ ವ್ಯಾಪ್ತಿಗೆ ಸೇರಿವೆ ಎಂದು ಪ್ರಕಟಣೆ ತಿಳಿಸಿದೆ.‌ ಪಾವೂರು ಉಳಿಯ ದ್ವೀಪದ ಸುತ್ತಮುತ್ತಲಿನ ಮರಳುಗಾರಿಕೆ ವಿರುದ್ಧ ಇತ್ತೀಚೆಗೆ ಭಾರೀ ಹೋರಾಟಗಳು ನಡೆದಿದ್ದವು.

RELATED ARTICLES
- Advertisment -
Google search engine

Most Popular