ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ನ ಫಾಸ್ಟಾಗ್ ಹೊಂದಿದವರು ಮಾ.15ರ ಒಳಗಾಗಿ ಹೊಸ ಫಾಸ್ಟಾಗ್ ಖರೀದಿ ಮಾಡಬೇಕು. ಹೀಗೆಂದು ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‌ಎಚ್‌ಎಐ) ಬುಧವಾರ ಸೂಚನೆ ನೀಡಿದೆ. ಈ ಮೂಲಕ ಟೋಲ್‌ಪ್ಲಾಜಾಗಳಲ್ಲಿ ಉಂಟಾಗಲಿರುವ ಸಂಭಾವ್ಯ ತೊಂದರೆ ನಿವಾರಿಸಿಕೊಳ್ಳಬೇಕು ಎಂದು ಗ್ರಾಹಕರಿಗೆ ಸಲಹೆ ಮಾಡಿದೆ. ಮಾ.15ರ ಬಳಿಕ ಪೇಟಿಎಂ ಬ್ಯಾಂಕ್‌ನ ಫಾಸ್ಟಾಗ್ ಹೊಂದಿರುವವರಿಗೆ ರಿಚಾರ್ಜ್ ಮಾಡುವ ವ್ಯವಸ್ಥೆ ಇರುವುದಿಲ್ಲ ಎಂದೂ ಅದು ಹೇಳಿದೆ. ಖಾತೆಯಲ್ಲಿ ಉಳಿದಿರುವ ಮೊತ್ತ ಬಳಕೆ ಮಾಡುವುದಕ್ಕೆ ಅವಕಾಶ ಇದೆ ಎಂದು ಪ್ರಾಧಿಕಾರ ತಿಳಿಸಿದೆ.