Friday, March 21, 2025
Homeಮುಲ್ಕಿಧಾರ್ಮಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ಸಾಧ್ಯ: ಎನ್. ವಿನಯ ಹೆಗ್ಡೆ

ಧಾರ್ಮಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ಸಾಧ್ಯ: ಎನ್. ವಿನಯ ಹೆಗ್ಡೆ

ಮುಲ್ಕಿ: ಧಾರ್ಮಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ಸಾಧ್ಯ, ಶ್ರೀ ಹರಿಹರ ಕ್ಷೇತ್ರದ ಬೆಳವಣಿಗೆಗೆ ದಿ ಹರಿ ಪೂಂಜಾ ರವರ ಕೊಡುಗೆ ಅಪಾರ, ದೇವರ ಮೇಲೆ ವಿಶ್ವಾಸವಿಟ್ಟು ಧರ್ಮದ ಮೇಲೆ ನಂಬಿಕೆ ಇದ್ದರೆ ಜೀವನದಲ್ಲಿ ಸಾಧಕಾಗಲು ಸಾಧ್ಯ ಎಂದು ನಿಟ್ಟೆ ವಿದ್ಯಾಸಂಸ್ಥೆಯ ಕುಲಾಧಿಪತಿಗಳಾದ ಎನ್ ವಿನಯ ಹೆಗ್ಡೆ ಹೇಳಿದರು.

ಅವರು ಕಾರ್ನಾಡ್ ಶ್ರೀ ಹರಿಹರ ವಿಷ್ಣುಮೂರ್ತಿ ಕ್ಷೇತ್ರದ ದೇವಸ್ಥಾನದ ಜೀರ್ಣೋದ್ದಾರ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಟೀಲು ಕ್ಷೇತ್ರದ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಶಾಸಕ ಉಮಾನಾಥ ಕೋಟ್ಯಾನ್,ಮಾಜೀ ಸಂಸದ ನಳಿನ್ ಕುಮಾರ್ ಕಟೀಲ್, ಮಾಜೀ ಸಚಿವ ಅಭಯಚಂದ್ರ ಜೈನ್, ದೇವಳದ ಆಡಳಿತ ಮುಕ್ತೇಸರ ಎಂ.ಎಚ್ ಅರವಿಂದ ಪೂಂಜ, ಉದ್ಯಮಿ ಆದಿತ್ಯ ಪೂಂಜಾ, ಕೃಷ್ಣ ಶೆಟ್ಟಿ ಅಗ್ಗೊಟ್ಟು ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ಯೋಗೀಶ್ ಕೋಟ್ಯಾನ್, ಹರ್ಷರಾಜ ಶೆಟ್ಟಿ, ರಾಧಿಕಾ ಕೋಟ್ಯಾನ್, ಉದ್ಯಮಿ ಧನಂಜಯ ಶೆಟ್ಟಿ ಮುಂಬೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ ರೈ,ಉದ್ಯಮಿ ಶರತ್ ಸಾಲ್ಯಾನ್ ಬೆಂಗಳೂರು, ವ್ಯವಸ್ಥಾಪನಾ ರವಿಕುಮಾರ್ ಭಟ್, ರಾಘವೇಂದ್ರ ಟಿ ರಾವ್, ಶಶೀoದ್ರ ಎಂ ಸಾ, ನೂತನ್ ಕೆ ಶೆಟ್ಟಿ, ಸುಧಾಮ ಫೌಂಡೇಶನ್ ಅಧ್ಯಕ್ಷ ಸುನಿಲ್ ಆಳ್ವ, ಸಮಿತಿಯ ಸದಸ್ಯರಾದ ಹರಿಹರ ಕ್ಷೇತ್ರ ಮಹಿಳಾ ಮಂಡಳಿಯ ಅಧ್ಯಕ್ಷೆ ಉಷಾ ಶೇಖರ್, ಸಮಿತಿಯ ಕಾರ್ಯದರ್ಶಿಗಳಾದ ವೈ. ಎನ್ ಸಾಲ್ಯಾನ್, ಪ್ರವೀಣ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು
ಸುದರ್ಶನ್ ಭಟ್ ಪ್ರಾರ್ಥಿಸಿದರು.

ಎಂ.ಎಚ್ ಅರವಿಂದ ಪೂಂಜ ಸ್ವಾಗತಿಸಿದರು. ಹೊರೆಕಾಣಿಕೆ ಸಮಿತಿಯ ಸಂಚಾಲಕ ಸುನೀಲ್ ಅಳ್ವ ಧನ್ಯವಾದ ಸಮರ್ಪಿಸಿದರು. ಡಾ.ಕಿಶೋರ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ‌ ಕಾರ್ಯದರ್ಶಿ ವೈ.ಎನ್ ಸಾಲ್ಯಾನ್ ಪ್ರಸ್ತಾವನೆಗೈದರು ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

RELATED ARTICLES
- Advertisment -
Google search engine

Most Popular