
ಮೂಡಬಿದಿರೆ : ಪಾಲಡ್ಕ ಕಲ್ಲಮುಂಡ್ಕುರು ಗ್ರಾಮವನ್ನು ಸಂಪರ್ಕಿಸುವ ರಸ್ತೆಯ ಗುಂಡ್ಯಡ್ಕ ಎಂಬಲ್ಲಿ ಶುಕ್ರವಾರ ರಾತ್ರಿಯಿಂದ ಗುಡ್ಡ ಕುಸಿತ ಆರಂಭವಾಗಿದೆ. ಇಂದು ಬೆಳಿಗ್ಗೆ ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಪಾಲಡ್ಕ ಪಂಚಾಯತ್ ಉಪಾಧ್ಯಕ್ಷ ಪ್ರವೀಣ್ ಸಿಕ್ತ್ವೆರಾ ರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ತನ್ನ ಜೇಸಿಬಿಯೊಂದಿಗೆ ಆಗಮಿಸಿದ ಅವರು ರಸ್ತೆಗೆ ಬಿದ್ದ ಮಣ್ಣು ಬದಿಗೆ ಸರಿಸುತ್ತಿದ್ದಂತೆ ಮತ್ತೆ ಕುಸಿತ ಕಂಡು ಜೇಸಿಬಿಯನ್ನೂ ಎಳೆದೊಯ್ಯಿತು. ಕಾರ್ಯಾಚರಣೆ ನಿಲ್ಲಿಸಿ ಅವರು ಮತ್ತೊಂದು ಜೇಸಿಬಿ ಕರೆತಂದು ಹಿಂದಿನ ಜೇಸಿಬಿಯನ್ನೂ ಅಲ್ಲಿಂದ ಬಿಡುಗಡೆಗೊಳಿಸಲಾಯಿತು. ಜೊತೆಗೆ ಆರು ಏಳು ಮನೆಗಳ ಜನರನ್ನು ತೆರವುಗೊಳಿಲಾಗಿದೆ. ಮುಂಜಾಗ್ರತಾ ಕ್ರಮವಾಗಿ ರಸ್ತೆ ಸಂಚಾರ ಬಂದ್ ಮಾಡಲಾಗಿದೆ.

ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಪುತ್ತಿಗೆ ಪಂಚಾಯತ್ ಅಧಿಕಾರಿ ಭೀಮಾ ನಾಯಕ್, ಪಾಲಡ್ಕ ಪಂಚಾಯತ್ ಅಧಿಕಾರಿ ರಕ್ಷಿತಾ ಡಿ, ಪಾಲಡ್ಕ ಗ್ರಾಮ ಕರಣಿಕ ಅನಿಲ್ ಕುಮಾರ್, ಉಪಾಧ್ಯಕ್ಷ ದಯಾನಂದ್, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಕಂದಾಯ ಅಧಿಕಾರಿಗಳು ಮಂಜುನಾಥ್, ಪುತ್ತಿಗೆ ಗ್ರಾಮ ಕರಣಿಕ ಗಾಯತ್ರಿ. ಅರಣ್ಯ ಇಲಾಖೆ ಅಧಿಕಾರಿಗಳು ಮೆಸ್ಕಾಂ ಅಧಿಕಾರಿಗಳು ಅಗ್ನಿಸ್ತಾಪಕ ಅಧಿಕಾರಿಗಳು ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಪ್ರದೇಶಕ್ಕೆ ಜನರು ಪ್ರವೇಶಿಸದಂತೆ ಎಚ್ಚರಿಕೆ ನೀಡಿದ್ದಾರೆ.
ಗುಂಡ್ಯಡ್ಕ ಬಳಿ ಗುಡ್ಡ ಕುಸಿಯುತ್ತಿರುವುದರಿಂದ ಪಾಲಡ್ಕ- ಗುಂಡ್ಯಡ್ಕ – ಕಲ್ಲಮುಂಡ್ಕೂರು ರಸ್ತೆಯನ್ನು ಗುಂಡ್ಯಡ್ಕ ಕ್ರಾಸ್ ಬಳಿ ಬ್ಯಾರಿಕೇಡ್ ಇರಿಸಿ ಸಂಚಾರ ನಿಷೇಧಿಸಲಾಗಿದೆ ಹಾಗೂ ಸಾರ್ವಜನಿಕರು ಸಂಚರಿಸದಂತೆ ಎಚ್ಚರಿಕೆ ಬ್ಯಾನರ್ ಅಳವಡಿಸಲಾಗಿದೆ ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿಸಿದ್ದಾರೆ ಪಾಲಡ್ಕ ಪಂಚಾಯತ್ ಅಧಿಕಾರಿ ಹಾಗೂ ಪುತ್ತಿಗೆ ಪಂಚಾಯತ್ ಅಧಿಕಾರಿ.