ಕ್ಯಾಲಿಫೋರ್ನಿಯಾ: ಗಾಢ ನಿದ್ರೆಯಲ್ಲಿರುವ ಇಬ್ಬರು ವ್ಯಕ್ತಿಗಳು ಕನಸಿನಲ್ಲಿ ಪರಸ್ಪರ ಸಂವಹನ ನಡೆಸುತ್ತಾರೆ ಎಂದು ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ಹೇಳಿದ್ದಾರೆ. ಇದು ವಿಶ್ವದಲ್ಲೇ ಮೊದಲ ಬಾರಿ ನಡೆದ ಸಂವಹನ ಎಂದು ಅವರು ಹೇಳಿಕೊಂಡಿದ್ದಾರೆ. ರೆಮ್‌ಸ್ಪೇಸ್ ಎಂಬ ಸಂಸ್ಥೆ ಈ ಸಂಶೋಧನೆ ನಡೆಸಿದೆ ಎಂದು ವರದಿಯಾಗಿದೆ.
ಸಂಶೋಧನೆಗಾಗಿ ಎರಡು ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿತ್ತು. ಒಬ್ಬ ಗಾಢ ನಿದ್ದೆಯಲ್ಲಿದ್ದಾಗ ಜುಲಕ್ ಎಂಬ ಪದ ಉಚ್ಚರಿಸಿದ್ದಾನೆ. ಈ ಸಮಯದಲ್ಲಿ ಆತ ಲುಸಿಡ್ ಡ್ರೀಮ್ (ಗಾಢ ನಿದ್ದೆಯಲ್ಲಿದ್ದಾಗ ಕಾಣುವ ಕನಸು)ನಲ್ಲಿದ್ದ ಎಂದು ಹೇಳಲಾಗಿದೆ. ವೈಜ್ಞಾನಿಕ ಸಾಧನಗಳ ಮೂಲಕ ಇದನ್ನು ಖಚಿತಪಡಿಸಿಕೊಳ್ಳಲಾಗಿದೆ.
ಇದಾದ 8 ನಿಮಿಷಗಳ ಬಳಿಕ ಮತ್ತೊಬ್ಬ ವ್ಯಕ್ತಿಯನ್ನು ಇದೇ ಲುಸಿಡ್ ಡ್ರೀಮ್ ಸ್ಥಿತಿಗೆ ತಲುಪಿಸಿ ಇಯರ್‌ಫೋನ್ ಮೂಲಕ ಜುಲಕ್ ಎಂಬ ಶಬ್ದದ ಎಲೆಕ್ಟ್ರಾನಿಕ್ ತರಂಗಗಳನ್ನು ಕೇಳಿಸಲಾಗಿದೆ. ತಕ್ಷಣವೇ ಆ ವ್ಯಕ್ತಿ ಜುಲಕ್ ಎಂದು ಉಚ್ಚರಿಸಿದ್ದಾನೆ. ಈ ಸಂಶೋಧನೆಗೆ ಬಳಸಿರುವ ವಿಧಾನದ ಬಗ್ಗೆ ಸಂಸ್ಥೆ ಹೇಳಿಲ್ಲ. ಈ ಸಂಶೋಧನೆ ನಿಜವಾಗಿದ್ದರೆ, ಇದು ಮಾನಸಿಕ ರೋಗಗಳ ಚಿಕಿತ್ಸೆ ಮತ್ತು ಕೌಶಲಾಭಿವೃದ್ಧಿಗೆ ನೆರವಾಗಲಿದೆ.
ಮನುಷ್ಯ ಕನಸಲ್ಲೂ ಸಂವಹನ ನಡೆಸಬಲ್ಲ | ಸಂಶೋಧನೆಯಲ್ಲಿ ಸಾಬೀತು
RELATED ARTICLES