Wednesday, February 19, 2025
HomeUncategorizedಭಾಷೆ ಬೆಳೆಯದೆ ಜನ ಬೆಳೆಯುವುದಿಲ್ಲ

ಭಾಷೆ ಬೆಳೆಯದೆ ಜನ ಬೆಳೆಯುವುದಿಲ್ಲ

ಭಾಷೆ ಸಂಸ್ಕೃತಿಗಳನ್ನು ಬೆಳೆಸಿಕೊಳ್ಳದ ಜನಾಂಗ ಆಂತರಿಕ ಚೈತನ್ಯವನ್ನು ಕಳೆದುಕೊಳ್ಳುತ್ತದೆ. ಈ ದೇಶದ ಮಣ್ಣ ಕಣಕಣದಲ್ಲೂ ಭಾಷೆಯ ಸೌಂರ‍್ಯವಿದೆ. ಎಲ್ಲಿಯವರೆಗೆ ಭಾಷೆ ಜನ ಜೀವನವನ್ನು ತುಂಬಿಕೊಳ್ಳುವುದಿಲ್ಲವೋ ಅಲ್ಲಿಅಯತನಕಜನರ ಭಾವ ಬರಡಾಗುತ್ತದೆ. ಪ್ರತಿಯೊಂದು ಭಾಷೆಯೂ ಒಂದೊಂದು ವರ. ಹಿಂದಿ ಭಾಷೆರಾಷ್ತ್ರವನ್ನುಜೋಡಿಸುವ ಭಾಷೆಎಂದು ಭುವನೇಂದ್ರ ಕಾಲೇಜಿನ ಹಿಂದಿ ಉಪನ್ಯಾಸಕರಾದಡಾ.ಅಶೋಕ್‌ಕ್ಲಿಫರ್ಡ್ಡಿಸೋಜಾ ಹೇಳಿದರು. ಅವರು ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ಪದವಿಪೂರ್ವಕಾಲೇಜಿನಲ್ಲಿ ನಡೆದ ಹಿಂದಿ ಉತ್ಸವ ಕಾರ‍್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ನುಡಿದರು.
ಸಮಾರಂಭದಅಧ್ಯಕ್ಷತೆಯನ್ನು ಪದವಿಪೂರ್ವಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್‌ ಕುಮಾರ್ ಶೆಟ್ಟಿ ವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್‌ ಅಧ್ಯಪಕರಾದ ನವೀನ್, ಸುಪ್ರಿಯಾ ಉಪಸ್ಥಿತರಿದ್ದರು.
ಕರ‍್ಯಕ್ರಮ ಸಂಯೋಜಕಿ ಉಪನ್ಯಾಸಕಿ ಶ್ರೀಮತಿ ದಿವ್ಯಲಕ್ಷ್ಮಿ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹರ್ಷಲ್ ಸ್ವಾಗತಿಸಿ ನವ್ಯಾ ವಂದಿಸಿದರು, ಮುಕ್ತಾ ಕರ‍್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಕವ್ವಾಲಿ ಗಝಲ್‌ಗಳು ಪ್ರಸ್ತುತಿಗೊಂಡವು.

RELATED ARTICLES
- Advertisment -
Google search engine

Most Popular