spot_img
24.6 C
Udupi
Monday, January 30, 2023
spot_img
spot_img
spot_img

ಉಗ್ರಕೃತ್ಯಗಳ ಬಗ್ಗೆ ತುಳುನಾಡಿನ ಭಾಗದ ಜನರು ಜಾಗೃತರಾಗಿರಬೇಕು: ಪೇಜಾವರ ಶ್ರೀ

ಉಡುಪಿ: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟದ ನಂತರ ಮಂಗಳೂರು ಉಡುಪಿಯಲ್ಲಿ ನಡೆಯುತ್ತಿರುವ ಉಗ್ರಕೃತ್ಯಗಳು, ಗೋಚರಕ್ಕೆ ಬಂದಿದ್ದು ಹೀಗಾಗಿ ತುಳುನಾಡಿನ ಭಾಗದ ಜನರು ಸದಾ ಜಾಗೃತರಾಗಿರಬೇಕು ಎಂದು ಪೇಜಾವರ ಶ್ರೀ ವಿಶ್ಚಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಕರಾವಳಿ ಜನರು ಸಂದೇಹಾಸ್ಪದ ಚಟುವಟಿಕೆ ಕಂಡ ಕೂಡಲೇ ಜಾಗೃತರಾಗಬೇಕು. ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಬೇಕು. ಉತ್ಥಾನ ದ್ವಾದಶಿ ಬಳಿಕ ಯಕ್ಷಗಾನ, ಕೋಲ, ಉತ್ಸವ, ಕಂಬಳ, ದೀಪೋತ್ಸವ, ನಾಗಮಂಡಲದಂತಹ ಹಲವಾರು ಉತ್ಸವ ನಡೆಯುತ್ತೆ. ಜನಸಂದಣಿ ಹೆಚ್ಚಿರುವ ಸಮಾರಂಭ ನಡೆಯುತ್ತೆ.ಇಂತಹ ಸ್ಥಳಗಳಲ್ಲಿ ಅನಾಹುತ ನಡೆದಲ್ಲಿ ಸಮಾಜಕ್ಕೆ ದೊಡ್ಡ ಹಾನಿ. ಪ್ರತಿಯೊಬ್ಬರೂ ಈ ಬಗ್ಗೆ ಸದಾ ಜಾಗೃತರಾಗಿಬೇಕು ಎಂದು ಶ್ರೀಗಳು ಎಚ್ಚರಿಸಿದ್ದಾರೆ.ಹಿಂದೂ ಸಂಕೇತ ಬಳಸಿ ಉಗ್ರ ಕೃತ್ಯ ಮಾಡುವುದು ನೋಡುತ್ತಿದ್ದೇವೆ. ಸಮಾಜದಲ್ಲಿ ದುಷ್ಕೃತ್ಯ ಎಸಗುವವರು ಹಿಂದೂ ಸಮಾಜದ ಮೇಲೆ ಹೇರುವ ನಿಟ್ಟಿನಲ್ಲಿ ಈ ಚಟುವಟಿಕೆ ನಡೆಸುತ್ತಿದ್ದಾರೆ. ಹೀಗಾಗಿಪ್ರತಿಯೊಬ್ಬರೂ ಮೊಬೈಲ್ ಹಾಗೂ ದಾಖಲೆ ಕಳೆದುಹೋದರೆ ಸಂಬಂಧಪಟ್ಟ ಇಲಾಖೆಗೆ ತಕ್ಷಣ ಮಾಹಿತಿ ನೀಡಿ.ಇಲ್ಲವಾದರೆ ಇಂತಹ ಸಂದರ್ಭದಲ್ಲಿ ಸಂದೇಹಕ್ಕೆ ಒಳಗಾಗಬೇಕಾಗುತ್ತೆ ಎಂದು ಹೇಳಿದ್ದಾರೆ.

Related Articles

Stay Connected

0FansLike
3,684FollowersFollow
0SubscribersSubscribe
- Advertisement -

Latest Articles