ಬಜಪೆ:ಪೆರಾರ ಶ್ರೀ ಬಲವಾಂಡಿ ಕ್ಷೇತ್ರಕ್ಕೆ ಸಂಬಂಧಪಟ್ಟ ಛತ್ರದರಸು ಚಾವಡಿ ಬಂಟಕಂಬ ರಾಜಾಂಗಣದ ಜೀರ್ಣೋದ್ದಾರದ ಪ್ರಯುಕ್ತ ಪಿಲಿಚಂಡಿ ದೈವಸ್ಥಾನದ ಜೀರ್ಣೋದ್ದಾರದ ಪ್ರಕ್ರಿಯೆ ಆರಂಭಗೊಂಡಿದ್ದು,ಇಂದು ಇದರ ಶಿಲಾನ್ಯಾಸ ಕಾರ್ಯಕ್ರಮವು
ಕುಡುಪು ಶ್ರೀ ಕೃಷ್ಣರಾಜ ತಂತ್ರಿಯವರ ಪೌರೋಹಿತ್ಯದಲ್ಲಿ ಕ್ಷೇತ್ರದ ಪೆರ್ಗಡೆಯವರಾದ ಮುಂಡಬೆಟ್ಟುಗುತ್ತು ಗಂಗಾಧರ ರೈ ಅವರ ಮಾರ್ಗದರ್ಶನದಲ್ಲಿ ಶಿಲಾನ್ಯಾಸ ಕಾರ್ಯಕ್ರಮವು ನಡೆಯಿತು.

ಈ ಸಂದರ್ಭ ಕ್ಷೇತ್ರದ ಮಧ್ಯಸ್ಥ ಬ್ರಾಣಬೆಟ್ಟುಗುತ್ತು ಪ್ರತಾಪಚಂದ್ರ ಶೆಟ್ಟಿ,ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರೂ ಹಾಗೂ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಶಿವಾಜಿ ಶೆಟ್ಟಿ ಕೊಳಕೆಬೈಲು, ಉಪಾಧ್ಯಕ್ಷ ಕೃಷ್ಣ ಅಮೀನ್, ಇಂಜಿನಿಯರ್ ರಿತೇಶ್ ದಾಸ್, ಶ್ರೀ ಕ್ಷೇತ್ರದ ಆಡಳಿತಾಧಿಕಾರಿ ಸಾಯೀಶ್ ಚೌಟ, ಸಮಿತಿಯ ಸದಸ್ಯರುಗಳಾದ ಓಂ ಪ್ರಕಾಶ್ ಶೆಟ್ಟಿ, ಪ್ರತೋಷ್ ಮಲ್ಲಿ, ಡಾ. ಮೋಹನ್ದಾಸ್ ಶೆಟ್ಟಿ, ವಿದ್ಯಾ ಜೋಗಿ, ಪ್ರಕಾಶ್ ಭಂಡಾರಿ, ರಮೇಶ್ ಅಮೀನ್, ಸುರೇಶ್ ಅಂಚನ್, ರಂಗನಾಥ ಭಂಡಾರಿ, ಹರೀಶ್ ಶೆಟ್ಟಿ ನಡುಗುತ್ತು, ಮೋಹನ್ ಪೂಜಾರಿ ಕಬೆತ್ತಿಗುತ್ತು, ಶೇಖರ ಸಪಲಿಗ,
16 ಗುತ್ತುಮನೆತನದ ಪ್ರಮುಖರು,
ವಿವಿಧ ಸಮಿತಿಯ ಇತರ ಪದಾಧಿಕಾರಿಗಳು, ಸದಸ್ಯರು, ವಿಲೇದಾರರು, ಗ್ರಾಮಸ್ಥರು ಹಾಜರಿದ್ದರು .