Sunday, July 21, 2024
Homeಮಂಗಳೂರುಪೆರ್ಲ: ಯುವ ಕರಾಡ ಸಮಾವೇಶ

ಪೆರ್ಲ: ಯುವ ಕರಾಡ ಸಮಾವೇಶ

ಪೆರ್ಲ: ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ.) ಅಗಲ್ಪಾಡಿ ಇದರ ಆಶ್ರಯದಲ್ಲಿ ನಡೆದ ಯುವ ಕರಾಡ ಸಮಾವೇಶವು ಶ್ರೀ ಶಂಕರ ಸದನ ಪೆರ್ಲದಲ್ಲಿ ಜೂನ್ 30 ಆದಿತ್ಯವಾರ ಜರುಗಿತು. ಕರಾಡ ಬ್ರಾಹ್ಮಣ ಸಂಘದ ಯುವಕರು ಮತ್ತು ಯುವತಿಯರು ಸೇರಿ ಈ ಸಮಾವೇಶವನ್ನು ಯಶಸ್ವಿಗೊಳಿಸಿದರು.

ಈ ಕಾರ್ಯಕ್ರಮದಲ್ಲಿ ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ.) ಅಗಲ್ಪಾಡಿ ಇದರ ಅಧ್ಯಕ್ಷ ರಮಾನಂದ ಎಡಮಲೆ, ಕಾರ್ಯದರ್ಶಿ ಗಣೇಶ್ ಚೇರ್ಕುಡ್ಲು, ಕೋಶಾಧಿಕಾರಿ ದಿವ್ಯ ಶಿರಂತಡ್ಕ ಉಪಸ್ಥಿತರಿದ್ದರು.
ಈ ಸಮಾವೇಶಕ್ಕೆ ಅಥಿತಿಯಾಗಿ ಡಾ. ಪ್ರದೀಪ್ ಆಟಿಕುಕ್ಕೆ ಮತ್ತು ರಾಜರಾಮ ಪೆರ್ಲ ಇವರು ಯುವ ಸಮಾಜದ ಭಾಂದವರಿಗೆ ಪ್ರೇರಣೆಯ ಮಾತುಗಳನ್ನಾಡಿದರು.

ಈ ಯುವ ಸಮಾವೇಶದಲ್ಲಿ ನೂತನ ಯುವ ಕರಾಡ ಯುವ ವೇದಿಕೆಯನ್ನು ಉದ್ಘಾಟಿಸಿ ಇದರ ನೂತನ ಅಧ್ಯಕ್ಷರಾಗಿ ವಚನ್ ಗೋಲ್ವಾಳ್ಕರ್, ಕಾರ್ಯದರ್ಶಿಯಾಗಿ ಪ್ರಜ್ವಲ್ ಘಾಟೆ ಆಯ್ಕೆಯಾದರು.
ಈ ಸಮಾವೇಶದ ನಿರೂಪಣೆಯನ್ನು ಸೂರ್ಯನಾರಾಯಣ ಭಟ್ ಸೈಪಂಗಲ್ಲು ನೆರವೇರಿಸಿದರು.

RELATED ARTICLES
- Advertisment -
Google search engine

Most Popular