Monday, January 13, 2025
Homeದಾವಣಗೆರೆಜ.6-7:ಶಂಕರಮೂರ್ತಿರವರ 9ನೇ ವರ್ಷದ ಪುಣ್ಯ ಸ್ಮರಣಾರ್ಥ ಸೌಹಾರ್ದ ಪ್ರಕಾಶನದಿಂದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

ಜ.6-7:ಶಂಕರಮೂರ್ತಿರವರ 9ನೇ ವರ್ಷದ ಪುಣ್ಯ ಸ್ಮರಣಾರ್ಥ ಸೌಹಾರ್ದ ಪ್ರಕಾಶನದಿಂದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

ದಾವಣಗೆರೆ : ಕಾಕನೂರು ಮಲ್ಲಪ್ಳರ ಬಸವಂತಪ್ಪ ಮತ್ತು ಚಂದ್ರಮ್ಮ ಬಸವಂತಪ್ಪ ಇವರ ಮಗನಾದ ಎಂ.ಬಿ. ಶಂಕರಮೂರ್ತಿ ಶಿಕ್ಷಕರು ಇವರ ಒಂಬತ್ತನೇ ವರ್ಷದ ಪುಣ್ಯ ಸ್ಮರಣಾರ್ಥ ದಾವಣಗೆರೆಯ ಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆ ಕನ್ನಡ ವಿಷಯಾಧಾರಿತ ಕಾರ್ಯಾಗಾರ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು 2025ನೇ ಜನವರಿ 06 ಮತ್ತು 07 ರಂದು ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆಯ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಕಾಶಕಿ ಎ.ಸಿ. ಶಶಿಕಲಾ ಶಂಕರಮೂರ್ತಿಯವರು ತಿಳಿಸಿದ್ದಾರೆ.
ಮಕ್ಕಳಿಗೆ ಕಾರ್ಯಾಗಾರ ಜನವರಿ 06 ಸೋಮವಾರ ಬೆಳಗ್ಗೆ 10 ಗಂಟೆಗೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಜನವರಿ 07 ರಂದು ಮಂಗಳವಾರ ಮಧ್ಯಾಹ್ನ 2-45ಕ್ಕೆ ಏರ್ಪಡಿಸಲಾಗಿದ್ದು ಉದ್ಘಾಟನೆಯನ್ನು ದಾವಣಗೆರೆಯ ಎಂ.ಎಂ ಶಿಕ್ಷಣ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ|| ವೈ.ಎಂ. ವಿಠಲರಾವ್ ನೆರವೇರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಡಾ|| ಜಸ್ಟಿನ್ ಡಿಸೌಜಾ
ಶಿವಣ್ಣನವರು ವಹಿಸಿಕೊಳ್ಳಲಿದ್ದಾರೆ. ಗೌರವ ಅಧ್ಯಕ್ಷರಾಗಿ ದಾವಣಗೆರೆಯ ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲರಾದ ಡಾ|| ಎಂ.ಎಂ. ಪಟ್ಟಣಶೆಟ್ಟಿ ಅವರು ಉಪಸ್ಥಿತರಿರುತ್ತಾರೆ. ದೊಡ್ಡಬಳ್ಳಾಪುರದ ವೈಜ್ಞಾನಿಕ ಚಿಂತಕ ಮತ್ತು ಹಿರಿಯ ಸಾಹಿತಿಗಳಾದ ಡಾ|| ಹುಲಿಕಲ್ ನಟರಾಜ್ ರವರು ವಿಜ್ಞಾನವನ್ನು ನಂಬಿ ಮೌಡ್ಯತೆಗೆ ಬಲಿಯಾಗಬೇಡಿ’’ ಪವಾಡದ ವಿಚಾರ ಕುರಿತು ವಿಶ್ಲೇಷಣೆ ಪ್ರತ್ಯಕ್ಷತೆಯ ಉಪನ್ಯಾಸ ನೀಡಲಿದ್ದಾರೆ.
ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲರಾದ ಡಾ|| ಎಚ್.ವಿ.ವಾಮದೇವಪ್ಪನವರು ಮತ್ತು ಶಿಕ್ಷಣ ಇಲಾಖೆಯ ವಿಶ್ರಾಂತ ಜಂಟಿ ನಿರ್ದೇಶಕರಾದ ಹೆಚ್.ಕೆ. ಲಿಂಗರಾಜುರವರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ದಾವಣಗೆರೆ ಜಿಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸಾಹಿತ್ಯ
ಪ್ರಕಾರಗಳ ಬರಹಗಳ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಹಿತ ನುಡಿಗಳನ್ನಾಡಲಿದ್ದಾರೆ.
ಸೌಹಾರ್ದ ಪ್ರಕಾಶನದ ವ್ಯಾಟ್ಸಪ್ ಗುಂಪಿನಿಂದ ಮಹಿಳೆಯರಿಗಾಗಿ ನಡೆಸಿದ ಕವಿ ರನ್ನನ ಹಳೆಗನ್ನಡ ಕಾವ್ಯ ಪೂರಕ ಪದಬಂಧ ಹಾಗೂ “ನಮ್ಮ ದೃಶ್ಯಕ್ಕೆ ನಿಮ್ಮ ಕವಿತೆ” ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿದ ವನಿತೆಯರಿಗೆ ಪ್ರೋತ್ಸಾಹಕ ಬಹುಮಾನ ವಿತರಣೆ ಹಾಗೂ ಬೆಂಗಳೂರಿನ ಎಲೆಮರೆಯ ಬಹುಮುಖ ಅಪ್ಪಟ ಪ್ರತಿಭಾನ್ವಿತ ಮಹಿಳೆ ರೇಖಾ ಪುರಾಣಿಕ್ ಹಾಗೂ ಸಹೃದಯಿ ಸಾಹಿತ್ಯ, ಸಂಸ್ಕೃತಿಯ ದಾವಣಗೆರೆಯ ಕುಸುಮಾ ಲೋಕೇಶ್ ಹಿತ ನುಡಿಗಳನ್ನು ಪ್ರಸ್ತುತಪಡಿಸಲಿದ್ದಾರೆ. ಜಗಳೂರು ತಾಲೂಕಿನ ಚಿತ್ರಕಲಾ ಶಿಕ್ಷಕರಾದ ರಮೇಶ್ ಎಚ್.ಕಟ್ಟಿಮನಿ ಶಾಮನೂರಿನ ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕಿ ಐ.ಕೆ. ಉಮಾದೇವಿ ಹಾಸನ ಜಿಲ್ಲೆಯ ಬೇಲೂರಿನ ಶಾಂತಲಾ ಬಾಲಕಿಯರ ಪ್ರೌಢಶಾಲೆ ಹಿಂದಿ ಶಿಕ್ಷಕಿ ಸುನಿತಾ ಜಿ.ಸಿ., ಕಲ್ಬುರ್ಗಿ ಜಿಲ್ಲೆಯ ಮಹಾಗಾಂವ ಸರ್ಕಾರಿ ಉರ್ದು ಶಾಲೆಯ ಮುಖ್ಯೋಪಾಧ್ಯಾಯರಾದ ಶುಕುರ್ಮಿಯ ಎಂ ಕಲ್ಮೋಡ್, ಉಡುಪಿ ಜಿಲ್ಲೆ, ಕಾಪು ತಾಲ್ಲೂಕು, ಮಲ್ಲಾರು ಸರ್ಕಾರಿ ಸಂಯುಕ್ತ ಉರ್ದು ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಗಿರಿಜಾ ನಾಯಕ್
ದಾವಣಗೆರೆ ಜಿಲ್ಲೆಯ ಗಂಗನಕಟ್ಟೆಯ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಕವಿತಾ ಎಸ್., ದಾವಣಗೆರೆ
ಡೆಂಟಲ್ ಕಾಲೇಜಿನ ಪ್ರಸನ್ನ ಜಿ.ಕೆ. ಮುಂತಾದವರನ್ನು ಅವರೆಲ್ಲರ ವಿವಿಧ ಕ್ಷೇತ್ರಗಳ ಸಾಧನೆಗಳನ್ನು ಗುರುತಿಸಿ ಸನ್ಮಾನ ಮಾಡಲಾಗುವುದು ಎಂದು ಸೌಹಾರ್ದ ಪ್ರಕಾಶನದ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶಶೆಣೈ ತಿಳಿಸಿದ್ದಾರೆ. ಸಾಹಿತ್ಯಿಕ, ಶೈಕ್ಷಣಿಕ ಕಾಳಜಿಯ ಸರ್ವರೂ ಆಗಮಿಸಿ ಈ ಸಮಾರಂಭ ಯಶಸ್ವಿಗೊಳಿಸಬೇಕಾಗಿ ಸೌಹಾರ್ದ ಪ್ರಕಾಶನದ ಸರ್ವ ಸದಸ್ಯರು ವಿನಂತಿಸಿದ್ದಾರೆ.

RELATED ARTICLES
- Advertisment -
Google search engine

Most Popular