ಕೊಡಗು: ಬುಡಕಟ್ಟು ಕೊಡವ ಭಾಷೆಯನ್ನು ಸಂವಿಧಾನದ ೩೪೫ ವಿಧಿ ಅಡಿಯಲ್ಲಿ ಕರ್ನಾಟಕದ ಅಧಿಕೃತ ಭಾಷೆ ಎಂದು ತಾರೀಕು ೧೪ ಸೆಪ್ಟೆಂಬರ್ ೨೦೨೨ ರಂದು ಹಿಂದಿ ದಿವಸದ ವಿಷಯದಲ್ಲಿ ವಿಧಾನಸಭೆಯಲ್ಲಿ ಚರ್ಚೆ ಮಾಡುವ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯ ಮಾಡಲು ಒಂದು ಕಾನೂನು ತರುತ್ತೇವೆ ಎಂದು ಹೇಳಿದ್ದರು. ಇದು ಬಹಳ ಸಂತೋಷದ ವಿಷಯ ಕನ್ನಡ ಭಾಷೆಯ ಬಗ್ಗೆ ನಮಗೆ ಬಹಳ ಗೌರವ ಇದೆ, ಅದೇ ರೀತಿ ಈ ಕಾನೂನಿನಲ್ಲಿ ಕನ್ನಡ ಭಾಷೆಯೊಂದಿಗೆ ಕರ್ನಾಟಕದ ಇತರೇ ಭಾಷೆಗಳಾದ ಕೊಡವ (ಕೊಡಗು) ಮತ್ತು ತುಳು ಭಾಷೆಯನ್ನು (ದಕ್ಷಿಣ ಕನ್ನಡ, ಉಡುಪಿ) ಕೂಡ ಕಡ್ಡಾಯ ಮಾಡಲು ಮನವಿ ಮಾಡುತ್ತೇನೆ ಎಂದು ತಿಳಿಸಿದರು.


ಕೊಡವ ಮತ್ತು ತುಳು ಭಾಷೆಯನ್ನು ಕಡ್ಡಾಯ ಮಾಡುವುದರಿಂದ ಕನ್ನಡ ಭಾಷೆಗೆ ಯಾವುದೇ ತೊಂದರೆ ಆಗುವುದಿಲ್ಲ. ಅಲ್ಲದೆ ಇವತ್ತು ಕನ್ನಡ ಭಾಷೆಗೆ ಮೂಲ ಕರ್ನಾಟಕದ ಭಾಷೆಗಳಿಂದ ಯಾವುದೇ ತೊಂದರೆ ಆಗುತ್ತಿಲ್ಲಾ, ಕೊಡವ ಮತ್ತು ತುಳು ಭಾಷೆ ನೀವು ಮಾಡುವ ಹೊಸ ಕಾನೂನಿನಲ್ಲಿ ಸೇರಿದರೆ ಕರ್ನಾಟಕದ ಮೂರು ಸುಂದರ ಭಾಷೆಗಳು ಉಳಿದಂತೆ ಆಗುತ್ತದೆ.
ಕೊಡವ ಭಾಷೆಯ ಲಿಪಿಗೆ ಸುಮಾರು ೧೩೭೦ ಇಂದ ದಾಖಲೆ ಇದೆ ಆದುದ್ದರಿಂದ ಕೊಡವ ಮತ್ತು ತುಳು ಭಾಷೆಯನ್ನು ರಚಿಸಲು ಹೊರಟಿರುವ ಹೊಸ ಕಾನೂನಿನಲ್ಲಿ ಸೇರಿಸಬೇಕು ಎಂದು ಮನವಿ ಮಾಡುತ್ತೇನೆ ಎಂದರು. ಅಲ್ಲದೆ ಭಾರತದ ದೇಶದ ಹಲವು ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ರಾಜ್ಯ ಭಾಷೆಗಳಿವೆ ಅದರಂತೆ ಸಂವಿಧಾನದ ಆರ್ಟಿಕಲ್ ೩೪೫ ಅಡಿಯಲ್ಲಿ ಕೊಡವ ಮತ್ತು ತುಳು ಭಾಷೆಯನ್ನು ಕೂಡ ಕರ್ನಾಟಕದ ರಾಜ್ಯ ಭಾಷೆಯಾಗಿ ಮಾಡಬೇಕು ಎಂದು ರೈತ ಮತ್ತು ಬುಡಕಟ್ಟು ಭಾಷಾ ಕೊಡವ ಇದರ ಕಾರ್ಯಕರ್ತ ಪ್ರತೀಕ್‌ ಪೊನ್ನಣ್ಣ ಈ ಸಂದರ್ಭದಲ್ಲಿ ತಿಳಿಸಿದರು.