Wednesday, September 11, 2024
Homeಮಣಿಪಾಲವಿಶ್ವ ಛಾಯಾಚಿತ್ರಗ್ರಹಣ ದಿನದ ಪ್ರಯುಕ್ತ ಮಾಹೆಯಲ್ಲಿ ಛಾಯಾಚಿತ್ರ ಪ್ರದರ್ಶನ, ಕಾರ್ಯಾಗಾರ

ವಿಶ್ವ ಛಾಯಾಚಿತ್ರಗ್ರಹಣ ದಿನದ ಪ್ರಯುಕ್ತ ಮಾಹೆಯಲ್ಲಿ ಛಾಯಾಚಿತ್ರ ಪ್ರದರ್ಶನ, ಕಾರ್ಯಾಗಾರ

ಮಣಿಪಾಲ : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ನ ಸಾರ್ವಜನಿಕ ಸಂಪರ್ಕ, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ [ಪಿಆರ್‌, ಮೀಡಿಯಾ ಆ್ಯಂಡ್‌ ಸೋಶಿಯಲ್‌ ಮೀಡಿಯಾ] ವಿಭಾಗವು ಸದ್ಭಾವ ಕೇಂದ್ರ [ಸೆಂಟರ್‌ ಫಾರ್‌ ಸದ್ಭಾವ], ಮಣಿಪಾಲ್‌ ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌ ಆ್ಯಂಡ್‌ ಪ್ಲ್ಯಾನಿಂಗ್‌ [ಎಂಎಸ್‌ಎಪಿ] ವಿಭಾಗಗಳ ಸಹಭಾಗಿತ್ವದಲ್ಲಿ ವಿಶ್ವ ಛಾಯಾಗ್ರಹಣ ದಿನ-2024 ನ್ನು ಇತ್ತೀಚೆಗೆ ಆಚರಿಸಿದ್ದು ಈ ಸಂದರ್ಭದಲ್ಲಿ ‘ಮಾಹೆ ಆವರಣದ ಬದುಕು’ [ಲೈಫ್‌ ಆನ್‌ ದಿ ಮಾಹೆ ಕ್ಯಾಂಪಸ್‌] ಎಂಬ ವಿಷಯ ಕೇಂದ್ರಿತವಾಗಿ ವಿವಿಧ ಕಾರ್ಯಕ್ರಮಗಳು ಮತ್ತು ಛಾಯಾಚಿತ್ರಪ್ರದರ್ಶನಗಳು ಜರಗಿದವು. ಈ ಉಪಕ್ರಮ [ಇನಿಶಿಯೇಟಿವ್‌] ಕ್ಕೆ ನಿಕಾನ್‌-ಇಂಡಿಯ ಸಹಯೋಗ ನೀಡಿತ್ತು.

‘ನಿಕಾನ್‌ ಇಂಡಿಯ’ದ ಪ್ರಾಯೋಜಕತ್ವದಲ್ಲಿ ನಿಕಾನ್‌ ಕೆಮರಾದ ಬಳಕೆದಾರರಿಗಾಗಿ ಉಚಿತ ಸೇವಾಸೌಲಭ್ಯದ ಶಿಬಿರವನ್ನು ಆಗಸ್ಟ್‌ 29, 2024 ರಂದು ಆಯೋಜಿಸುವುದರೊಂದಿಗೆ ಸರಣಿ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಈ ಶಿಬಿರವು ನಿಕಾನ್‌ ಕೆಮರಾ ಬಳಸುವ ವಿದ್ಯಾರ್ಥಿಗಳಿಗೆ ಮತ್ತು ಸಿಬಂದಿಗಳಿಗೆ ಪ್ರಯೋಜನಕಾರಿಯಾಯಿತು. ನೂರಕ್ಕಿಂತಲೂ ಅಧಿಕ ಮಂದಿ ಈ ತರಬೇತಿ ಶಿಬಿರದ ಲಾಭವನ್ನು ಪಡೆದುಕೊಂಡರು.
‘ನಿಕಾನ್‌ ಇಂಡಿಯ’ದ ವತಿಯಿಂದ ಆಗಸ್ಟ್‌ 30, 2024ರಂದು ಛಾಯಾಚಿತ್ರ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಆವಶ್ಯಕ ಛಾಯಾಚಿತ್ರಗ್ರಹಣ ತಂತ್ರಗಾರಿಕೆ, ಉಪಕರಣಗಳ ನಿಭಾವಣೆ, ಸೃಜನಶೀಲತೆಯೊಂದಿಗೆ ಬಳಕೆ, ಛಾಯಾಗ್ರಹಣದ ಕೌಶಲ ಇತ್ಯಾದಿಗಳ ಬಗ್ಗೆ ಮಾರ್ಗದರ್ಶನ ನೀಡಲಾಯಿತು.
ಮಾಹೆ ಕ್ಯಾಂಪಸ್‌ನ ಸುತ್ತಮುತ್ತಲಿನ ಬದುಕಿಗೆ ಸಂಬಂಧಿಸಿದ ಛಾಯಾಚಿತ್ರಪ್ರದರ್ಶನ ಸಹೃದಯರ ಗಮನಸೆಳಯಿತು.
ಸಮಾರೋಪ ಸಮಾರಂಭದಲ್ಲಿ ಮಣಿಪಾಲ್‌ ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌ನ ನಿರ್ದೇಶಕ ಡಾ. ಕಲ್ಯಾಣ್‌ ಕುಮಾರ್‌ ಮುಖರ್ಜಿ, ಸಾರ್ವಜನಿಕ ಸಂಪರ್ಕ, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ಉಪನಿರ್ದೇಶಕ ಸಚಿನ್‌ ಕಾರಂತ್‌, ಸುರೇಶ್‌ ಕೋಟ್ಯಾನ್‌, ಮಿಥುನ್‌ರಾಜ್‌, ಟಿ. ಎನ್‌. ತ್ರಿವಿಕ್ರಮ್‌, ನಿಕಾನ್‌ ಇಂಡಿಯದ ಅರುಣ್‌ ಉಪಸ್ಥಿತರಿದ್ದರು. ಈ ಕಾರ್ಯಕ್ರಮವು ಕೇವಲ ಆಚರಣೆಯಾಗದೆ ವಿದ್ಯಾರ್ಥಿಗಳು ಮತ್ತು ಸಿಬಂದಿಗಳಲ್ಲಿ ಸೃಜನಶೀಲತೆಯನ್ನು ಉತ್ತೇಜಿಸುವ ಮತ್ತು ಅವರ ಪ್ರತಿಭಾಪ್ರದರ್ಶನಕ್ಕೆ ವೇದಿಕೆ ಒದಗಿಸುವ ಮಾಹೆಯ ಬದ್ಧತೆಯ ಪ್ರತೀಕವಾಗಿತ್ತು.

RELATED ARTICLES
- Advertisment -
Google search engine

Most Popular