Thursday, December 5, 2024
HomeUncategorizedಪೊಲೀಸರ ಮಿಂಚಿನ ಕಾರ್ಯಚರಣೆ : ಅಪಹರಿಸಲಾಗಿದ್ದ ನವಜಾತ ಶಿಶು ತಾಯಿ ಮಡಿಲಿಗೆ

ಪೊಲೀಸರ ಮಿಂಚಿನ ಕಾರ್ಯಚರಣೆ : ಅಪಹರಿಸಲಾಗಿದ್ದ ನವಜಾತ ಶಿಶು ತಾಯಿ ಮಡಿಲಿಗೆ

ಕಲಬುರಗಿ: ಕಲಬುರಗಿ ಪೊಲೀಸರ ಮಿಂಚಿನ ಕಾರ್ಯಚರಣೆಯಿಂದಾಗಿ ಅಪಹರಿಸಲಾಗಿದ್ದ ನವಜಾತ ಶಿಶು ತನ್ನ ತಾಯಿ ಮಡಿಲ ಸೇರಿದೆ. ಜಿಮ್ಸ್ ಆಸ್ಪತ್ರೆಯಿಂದ ಅಪಹರಿಸಲಾಗಿದ್ದ ನವಜಾತ ಶಿಶುವನ್ನು ನಗರದ ಪೊಲೀಸರು ಕೇವಲ ಎರಡು ದಿನಗಳಲ್ಲೇ ಅದನ್ನು ಹುಡುಕಿ ತಂದು ತಂದೆ-ತಾಯಿಗೆ ಒಪ್ಪಿಸಿದ್ದಾರೆ. ಕಲಬುರಗಿ ಪೊಲೀಸ್ ಆಯುಕ್ತ ಡಾ ಶರಣಪ್ಪ ಎಸ್ ಡಿ ಮತ್ತವರ ಸಿಬ್ಬಂದಿಯ ದಕ್ಷತೆ ಮತ್ತು ಕಾರ್ಯಕ್ಷಮತೆ ಶ್ಲಾಘನೀಯ. ಮಗುವನ್ನು ವಾಪಸ್ಸು ಪಡೆದ ತಂದೆ-ತಾಯಿ ಪೊಲೀಸರಿಗೆ ಕೃತಜ್ಞತೆ ಮತ್ತು ಧನ್ಯವಾದ ಸಲ್ಲಿಸಿದ್ದಾರೆ.

RELATED ARTICLES
- Advertisment -
Google search engine

Most Popular