Tuesday, December 3, 2024
Homeಅಪರಾಧಮದುವೆ ಮಂಟಪದಿಂದಲೇ ಫೋಟೋಗ್ರಾಫರ್  ಕಿಡ್ನ್ಯಾಪ್ !

ಮದುವೆ ಮಂಟಪದಿಂದಲೇ ಫೋಟೋಗ್ರಾಫರ್  ಕಿಡ್ನ್ಯಾಪ್ !

ಬೆಳಗಾವಿ : ನಾಲ್ವರು ದುಷ್ಕರ್ಮಿಗಳಿಂದ ಮದುವೆ ಮಂಟಪದಿಂದ ಫೋಟೋಗ್ರಾಫರ್  ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿರುವಂತಹ ಘಟನೆ ನಗರದ ಕೆಪಿಟಿಸಿಎಲ್ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಹೆಣ್ಣು ಮಕ್ಕಳನ್ನು ಕಾಡಿಸುತ್ತಿದ್ದರೆಂದು ಹೇಳಿ ಹಲ್ಲೆ ಮಾಡಲಾಗಿದೆ. ಬೈಲಹೊಂಗಲ ಪಟ್ಟಣದಲ್ಲಿ ವಾಸವಾಗಿರುವ ಉಮೇಶ್ ಹೊಸೂರು ಕಿಡ್ನ್ಯಾಪ್ ಆಗಿದ್ದ ಫೋಟೋಗ್ರಾಫರ್ ಮದುವೆ ಆರ್ಡರ್ ಅಂತಾ ಉಮೇಶ್‌ ಬೆಳಗಾವಿಗೆ ಬಂದಿದ್ದರು. ಈ ವೇಳೆ ನಾಲ್ವರು ಅವರನ್ನು ಕಿಡ್ನ್ಯಾಪ್ ಮಾಡಿ, ಬೈಲಹೊಂಗಲ ತಾಲೂಕಿನ ಚಿವಟಗುಂಡಿ ಕ್ರಾಸ್ ಬಳಿ ಕಾರು ನಿಲ್ಲಿಸಿ ರಾಡ್​ನಿಂದ ಹಲ್ಲೆ ಮಾಡಿ ಬಿಟ್ಟು ಹೋಗಿದ್ದಾರೆ. ಸದ್ಯ ಬೈಲಹೊಂಗಲ ಖಾಸಗಿ ಆಸ್ಪತ್ರೆಯಲ್ಲಿ ಫೋಟೋಗ್ರಾಫರ್ ಉಮೇಶ್‌ ಚಿಕಿತ್ಸೆ ಪಡೆಯುತ್ತಿದ್ದಾರೆ.ಕೇಸ್ ದಾಖಲಾಗುತ್ತಿದ್ದಂತೆ ವಿಕ್ಕಿ, ಪ್ರವೀಣ್ ಉಮರಾಣಿ, ಬಸವರಾಜ ನರಟ್ಟಿ ಸೇರಿ 8 ಜನರನ್ನು ಬಂಧಿಸಲಾಗಿದೆ. ಮಾಳಮಾರುತಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಪ್ರತಿಕ್ರಿಯಿಸಿದ್ದು,  ಉಮೇಶ್ ಹೊಸೂರು ಎಂಬಾತನನ್ನ ಕಿಡ್ನ್ಯಾಪ್ ಮಾಡಿದ್ದಾರೆ ಅಂತಾ ಕೇಸ್ ದಾಖಲಾಗಿದೆ. ಕೆಪಿಟಿಸಿಎಲ್ ಕಲ್ಯಾಣ ಮಂಪಟದಿಂದ ಕಿಡ್ನ್ಯಾಪ್ ಮಾಡಿದ್ದರು. ಬೈಲಹೊಂಗಲ ಕರೆದುಕೊಂಡು ಹೋಗಿ ಉಮೇಶ್ ಮೇಲೆ ಹಲ್ಲೆ ಮಾಡಿದ್ದಾರೆ.

ಅಲ್ಲಿಂದ ತಪ್ಪಿಸಿಕೊಂಡು ಹೋದ ಉಮೇಶ್ ಬೈಲಹೊಂಗಲ ಠಾಣೆಗೆ ಹೋಗಿದ್ದರು. ಬೈಲಹೊಂಗಲ ಪೊಲೀಸರ ಸೂಚನೆ ಮೇರೆಗೆ ಮಾಳಮಾರುತಿ ಠಾಣೆಯಲ್ಲಿ ಕಿಡ್ನ್ಯಾಪ್ ಕೇಸ್ ಮಾಡಿದ್ದಾರೆ. ಆರೋಪಿ ಬಸವರಾಜ ನರಟ್ಟಿ ಜೊತೆಗೆ ಉಮೇಶ್ ಕೆಲಸ ಮಾಡಿದ್ದ. ಉಮೇಶ್ ಮದುವೆ ವಿಚಾರವಾಗಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಆ ಸಿಟ್ಟಿನಿಂದ ಬುದ್ದಿ ಕಲಿಸಲು ಕಿಡ್ನ್ಯಾಪ್ ಮಾಡಿದ್ದಾರೆ. ಎಂಟು ಜನರನ್ನ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular