Sunday, July 14, 2024
Homeಅಪಘಾತಸುಬ್ರಹ್ಮಣ್ಯ | ಭಾರೀ ಮಳೆ; ನದಿ ಸೇತುವೆ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋದ ಪಿಕಪ್

ಸುಬ್ರಹ್ಮಣ್ಯ | ಭಾರೀ ಮಳೆ; ನದಿ ಸೇತುವೆ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋದ ಪಿಕಪ್

ಪುತ್ತೂರು: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ಸುಬ್ರಹ್ಮಣ್ಯ, ಸುಳ್ಯ ಪ್ರದೇಶದಲ್ಲಿ ನದಿ, ಹೊಳೆಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಹೊಳೆಯೊಂದರ ಸೇತುವೆ ದಾಟುತ್ತಿದ್ದ ವೇಳೆ ಏಕಾಏಕಿ ನೀರು ತುಂಬಿದುದರಿಂದ ಪಿಕಪ್ ವಾಹನವೊಂದು ಕೊಚ್ಚಿ ಹೋದ ಘಟನೆ ನಡೆದಿದೆ. ಸುಬ್ರಹ್ಮಣ್ಯ ಸಮೀಪದ ಕಲ್ಮಕಾರಿನ ನದಿಯಲ್ಲಿ ಈ ಘಟನೆ ನಡೆದಿದೆ.

ಹೊಳೆಗೆ ನಿರ್ಮಿಸಲಾದ ಸೇತುವೆಯ ಮೇಲೆ ತೆಂಗಿನ ಕಾಯಿ ಲೋಡ್ ಮಾಡಿಕೊಂಡು ಪಿಕಪ್ ವಾಹನ ಚಲಿಸುತ್ತಿತ್ತು. ಈ ವೇಳೆ ಹೊಳೆಯ ನೀರಿನ ಹರಿವಿನ ರಭಸ ಏಕಾಏಕಿ ಹೆಚ್ಚಾಗಿದೆ. ಸೇತುವೆ ದಾಟುತ್ತಿದ್ದ ಪಿಕಪ್ ನೀರು ಪಾಲಾಗಿದೆ. ಕೂಡಲೇ ಸಾರ್ವಜನಿಕರು ಸೇರಿ ಚಾಲಕನನ್ನು ರಕ್ಷಿಸಿದ್ದಾರೆ.

RELATED ARTICLES
- Advertisment -
Google search engine

Most Popular