ದುಬೈ: ಎನ್ ಎನ್‌ಎಂ ಪ್ರೊಡಕ್ಷ ನಲ್ಲಿ ದುಬೈಯ ಉದ್ಯೋಗಿಗಳಾದ ಆತ್ಮಾನಂದ ರೈ ಮತ್ತು ಭರತ್ ರಾಮ್ ರೈ ನಿರ್ಮಾಣದ ಭರತ್ ಭಂಡಾರಿ ಮತ್ತು ಸ್ವಾತಿ ಶೆಟ್ಟಿ ನಾಯಕ ನಾಯಕಿಯಾರಗಿ ಅಭಿನಯದ ‘ಪಿಲಿ’ ತುಳು ಚಲನ ಚಿತ್ರದ ಯುಎಇಯ ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಬಿಡುಗಡೆ ಮತ್ತು ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮ ಜ.22ರಂದು ದುಬೈನಲ್ಲಿ ಜರಗಿತು.
ಫಾರ್ಚೂನ್ ಅಟ್ಯೂನ್ ನಲ್ಲಿ ಬಿಡುಗಡೆ ಕಾರ್ಯಕ್ರಮವನ್ನು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಫಾರ್ಚೂನ್ ಗ್ರೂಪ್ ಸಂಸ್ಥೆಯ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮಿ ಚಿತ್ರ ನಿರ್ಮಾಪಕರಾದ ಹರೀಶ್ ಶೇರಿಗಾರ್, ಹರೀಶ್ ಬಂಗೇರ, ಬಿಲ್ಲವಾಸ್ ಸಂಘದ ಸತೀಶ್ ಪೂಜಾರಿ, ಯಕ್ಷಗಾನ ಅಭ್ಯಾಸ ಕೇಂದ್ರದ ದಿನೇಶ್ ಶೆಟ್ಟಿ ಕೊಟಿಂಜರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಯುಎಇಯ ದುಬೈ ಮತ್ತುಅಬುಧಾಬಿಯಲ್ಲಿ ಫೆ. 4,5 ಮತ್ತು 11ರಂದು ಬಿಡುಗಡೆಯಾಗುವ ಸಿನಿಮಾ ಪ್ರಿಮಿಯರ್ ಪ್ರದರ್ಶನದ ಟಿಕೆಟ್‌ಗಳನ್ನು ಬಿಡುಗಡೆ ಮಾಡಿದ ವಂದಿಸಿದರು. ಗಣ್ಯರು ಪಿಲಿ ಸಿನಿಮಾಕ್ಕೆ ಶುಭ ಹಾರೈಸಿದರು.
ಸಿನಿಮಾದ ಪ್ರಥಮ ಟಿಕೆಟನ್ನು ಸರ್ವೋತ್ತಮ ಶೆಟ್ಟಿಯವರು ಖರೀದಿಸಿ ಟಿಕೆಟ್ ಖರೀದಿಗೆ ಚಾಲನೆ ನೀಡಿದರು. ಪ್ರವೀಣ್ ಕುಮಾರ್ ಶೆಟ್ಟಿಯವರು ಸಿನಿಮಾದ ಒಂದು ಹಾಡನ್ನು ಬಿಡು ಗಡೆಗೊಳಿಸಿದರು.
ಸಿನಿಮಾದಲ್ಲಿ ಮಣಿಕಾಂತ್ ಕದ್ರಿ ಯವರ ಸಂಗೀತದಲ್ಲಿ ನಾಲ್ಕು ಹಾಡು
.ಗಳಿವೆ. ಪಟ್ಲ ಸತೀಶ್ ಶೆಟ್ಟಿ, ನಿಹಾಲ್ ತಾಮ್ರ ಅನುರಾಧ ಭಟ್, ಕಲಾವತಿ, ಉಜ್ವಲ ಆಚಾರ್, ಮುಂತಾದವರು ಹಾಡಿದ್ದಾರೆ.
ಈ ಚಿತ್ರದ ತಾರಾಗಣದಲ್ಲಿ ವಿಜಯ್‌ಕುಮಾರ್ ಕೊಡಿಯಾಲ್ ಬೈಲ್ ಮುಖ್ಯ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ತ್ರಿಷಾ ಶೆಟ್ಟಿ, ಕೃತಿ ಶೆಟ್ಟಿ, ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂ ಜೂರು, ವಿಸ್ಮಯ ವಿನಾಯಕ್, ಸ್ವರಾಜ್ ಶೆಟ್ಟಿ, ಸಂತೋಷ್ ಶೆಟ್ಟಿ, ದ್ದಾಗಿದೆ. ರೂಪ ಡಿ. ಶೆಟ್ಟಿ, ನಮಿತಾ ಕೂಳೂ ರು, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ ಸೇರಿದಂತೆ ಹಲವಾರು ಪ್ರಭುದ್ಧ ಕಲಾವಿದರು ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ.
ಗಣೇಶ್ ನೀರ್ಚಾಲ್ ರ ಸಂಕಲನ ಈ ಚಿತ್ರಕ್ಕಿದೆ. ಸುಂದರ ವಾದ ನಾಲ್ಕು ಹಾಡುಗಳಿಗೆ ಮಯೂರ್ ಆರ್. ಶೆಟ್ಟಿ, ಡಿ.ಬಿ.ಸಿ ಶೇಖರ್ ಮತ್ತು ಕೆ.ಕೆ. ಪೇಜಾವ ಸಾಹಿತ್ಯ ಬರೆದಿ ದ್ದಾರೆ. ಈ ಚಿತ್ರಕ್ಕೆ ಸಂದೇಶ್ ಬಿಜೈ ಸಂಭಾಷಣೆ ಬರೆದಿದ್ದು, ನಿರ್ದೇಶನ ತಂಡದಲ್ಲಿ ಚಿತ್ರ ನಿರ್ದೇಶಕ ತ್ರಿಶೂಲ್ ಶೆಟ್ಟಿ, ಸಂದೇಶ್ ಬಿಜೈ ಮುಂತಾ ದವರು ಕಾರ್ಯನಿರ್ವಹಿಸಿದ್ದಾರೆ. ಪ್ರಚಾರ ಕಲೆ ವಿನ್ಯಾಸ ದೇವಿ ರೈಯವರದ್ದಾಗಿದೆ.
ಗಿರೀಶ್ ನಾರಾಯಣ್ ನೇತೃತ್ವದ ಹುಲಿ ವೇಷದ ಕುಣಿತ ಕಾರ್ಯಕ್ರಮಕ್ಕೆ ಮೆರುಗನ್ನು ತಂದಿತು. ರಾಜೇಶ್ ಕುತ್ತಾರ್ ಕಾರ್ಯಕ್ರಮ ನಿರ್ವ ಹಿಸಿದರು. ನಿರ್ಮಾಪಕ ಆತ್ಮಾನಂದ ರೈ ವಂದಿಸಿದರು.
ವೇದಿಕೆಯಲ್ಲಿ ನಟ, ನಿರ್ದೇಶಕ ವಿಜಯಕುಮಾರ್ ಕೋಡಿಯಾಲ್ ಸದ್ದು ಮಾಡುತ್ತಿದೆ. ಬೈಲ್, ನಾಯಕ ನಾಯಕಿಯರಾದ ಭರತ್ ಭಂಡಾರಿ, ಸ್ವಾತಿ ಶೆಟ್ಟಿ, ನಿರ್ಮಾ ಪಕ ಆತ್ಮಾನಂದ ರೈ ದುಬೈ ಉಪಸ್ಥಿತರಿದ್ದರು.