Monday, July 15, 2024
Homeಧಾರ್ಮಿಕಪಿಲಿಂಗಾಲು: ನಾಳೆಯಿಂದ ಭಜನಾ ಮಂಗಲೋತ್ಸವ

ಪಿಲಿಂಗಾಲು: ನಾಳೆಯಿಂದ ಭಜನಾ ಮಂಗಲೋತ್ಸವ

ಬಂಟ್ವಾಳ: ಪರಶುರಾಮ ತಪಸ್ಸು ಮಾಡಿದ ಪುಣ್ಯಭೂಮಿ ಎಂದೇ ಗುರುತಿಸಿಕೊಂಡಿರುವ ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರೀ ದೇವಿ ದೇವಸ್ಥಾನದಲ್ಲಿ ಇದೇ 30 ಹಾಗೂ 31ರಂದು 18ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮತ್ತು 50ನೇ ವರ್ಷದ ಭಜನಾ ಮಂಗಲೋತ್ಸವ ನಡೆಯಲಿದೆ.

30ರಂದು ಬೆಳಿಗ್ಗೆ ಗಂಟೆ 7.30ಕ್ಕೆ ಗಣಯಾಗ, ಮಹಾಗಣಪತಿ, ಗುರು ರಾಘವೇಂದ್ರ ಸ್ವಾಮಿ ಹಾಗೂ ಗಾಯತ್ರಿ ದೇವಿಗೆ ಕಲಶಾಭಿಷೇಕ, ಪ್ರಸನ್ನಪೂಜೆ, 11 ಗಂಟೆಗೆ ನಾಗದೇವರಿಗೆ ಆಶ್ಲೇಷಾ ಬಲಿ, ನಾಗತಂಬಿಲ, ಕಾಲ ರಕ್ತೇಶ್ವರಿಗೆ ಪರ್ವ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ 6 ಗಂಟೆಗೆ ಭಜನೆ, 9 ಗಂಟೆಗೆ ರಂಗಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

31ರಂದು ಬೆಳಿಗ್ಗೆ 7.30ಕ್ಕೆ ‘ಗಾಯತ್ರಿ ಯಾಗ’, 10.30ಕ್ಕೆ ರಕ್ತೇಶ್ವರಿ, ಮಹಿಷಂದಾಯ, ಅಣ್ಣಪ್ಪ ಪಂಜುರ್ಲಿ ದೈವಗಳಿಗೆ ಪರ್ವ, ಸಾಮೂ ಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ಭಜನೆ ಆರಂಭಗೊಂಡು 8 ಗಂಟೆಗೆ ಮಂಗಲೋತ್ಸವ ಮತ್ತು ರಂಗಪೂಜೆ ಬಳಿಕ ಅನ್ನಸಂತರ್ಪಣೆ ಇರುತ್ತದೆ. ರಾತ್ರಿ 8.30ಕ್ಕೆ ಹನುಮಗಿರಿ ಮೇಳದಿಂದ ‘ವೇದೋದ್ಧರಣ (ಮತ್ಯಾವತಾರ) ಶ್ರೀನಿವಾಸ ಕಲ್ಯಾಣ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ ಎಂದು ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್‌.ಪಂಡಿತ್ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular