Thursday, May 1, 2025
HomeUncategorizedಪಿಲಿಂಗಾಲು: ಶ್ರೀ ಗಾಯತ್ರಿ ದೇವಿ ದೇವಸ್ಥಾನ ಗಾಯತ್ರಿ ಯಾಗ, ಭಜನಾ ಮಂಗಲೋತ್ಸವ

ಪಿಲಿಂಗಾಲು: ಶ್ರೀ ಗಾಯತ್ರಿ ದೇವಿ ದೇವಸ್ಥಾನ ಗಾಯತ್ರಿ ಯಾಗ, ಭಜನಾ ಮಂಗಲೋತ್ಸವ


ಬಂಟ್ವಾಳ:ಇಲ್ಲಿನ ವಗ್ಗ ರಾಷ್ಟೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರಿದೇವಿ ದೇವಸ್ಥಾನದಲ್ಲಿ ೧೯ ನೇ ವರ್ಷದ ಪ್ರತಿಷ್ಠಾ ವರ್ಧಂತಿ ಉತ್ಸವ ಮತ್ತು ೫೧ ನೇ ವರ್ಷದ ಭಜನಾ ಮಂಗಲೋತ್ಸವ ಪ್ರಯುಕ್ತ ‘ಗಾಯತ್ರೀ ಯಾಗ’ ಸಹಿತ ದೇವರಿಗೆ ಕಲಶಾಭಿಷೇಕ ಮತ್ತು ರಂಗಪೂಜೆ ಸೋಮವಾರ ನಡೆಯಿತು.
ಇದೇ ವೇಳೆ ಶ್ರೀ ಮಹಾಗಣಪತಿ ದೇವರಿಗೆ ಗಣಯಾಗ, ಗುರು ರಾಘವೇಂದ್ರ ಸ್ವಾಮಿ ವಿಗ್ರಹಕ್ಕೆ ಗುರುಪೂಜೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ನಾಗಬನದಲ್ಲಿ ಆಶ್ಲೇಷಾ ಬಲಿ ಮತ್ತು ನಾಗತಂಬಿಲ ಪೂಜೆ, ಪರಿವಾರ ದೈವಗಳಿಗಳಿಗೆ ಪರ್ವ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್, ಉತ್ಸವ ಸಮಿತಿ ಗೌರವಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್, ಕಾರಿಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾಗೇಶ ಕಲ್ಲಡ್ಕ, ಪ್ರಮುಖರಾದ ಜಯಪ್ರಕಾಶ್ ತುಂಬೆ, ಉಮೇಶ ಬೋಳಂತೂರು, ಸುಜಿತ್ ಕುಮಾರ್ ಜೈನ್, ಸಿ.ಅನಂತ ಪೈ ವಾಮದಪದವು, ಮೋಹನ್ ಕೆ.ಶ್ರೀಯಾನ್ ರಾಯಿ, ಎಂ.ಬೂಬ ಸಪಲ್ಯ ಮುಂಡಬೈಲು, ಕೆ.ಬಾಬು ಸಪಲ್ಯ ವಗ್ಗ, ಜಗದೀಶ ಕುಂದರ್, ಪುರುಷೋತ್ತಮ ಟೈಲರ್, ಸೀತಾರಾಮ ಸಜಿಪ, ಚಿದಾನಂದ ನಾಯ್ಕ್, ಭಜನಾ ಸಮಿತಿ ಅಧ್ಯಕ್ಷ ಜಯ ಪೂಜಾರಿ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular