ಬಂಟ್ವಾಳ: ವಗ್ಗ ರಾಷ್ಟ್ರೀಯ ಹೆದ್ದಾರಿಯ ಸಮೀಪದ ಕಾಡಬೆಟ್ಟು ಗ್ರಾಮದ ಪಿಲಿಂಗಾಲು ಶ್ರೀ ಗಾಯತ್ರಿದೇವಿ ದೇವಸ್ಥಾನದಲ್ಲಿ ಶನಿವಾರ 18ನೇ ವರ್ಷದ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವ ಮತ್ತು 50ನೇ ವರ್ಷದ ಭಜನಾ ಮಂಗಲೋತ್ಸವ ಕಾರ್ಯಕ್ರಮಗಳು ನಡೆದವು.
ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯ ಭಟ್ ಮತ್ತು ಗುರುರಾಜ್ ಭಟ್ ಅವರು ಶ್ರೀ ಮಹಾಗಣಪತಿ ದೇವರಿಗೆ ಗಣಯಾಗ ಸಹಿತ ಶ್ರೀ ಗುರು ರಾಘವೇಂದ್ರ ಸ್ವಾಮಿ ಮತ್ತು ಶ್ರೀ ಗಾಯತ್ರೀ ದೇವಿಗೆ ಕಲಶಾಭಿಷೇಕವನ್ನು ನೆರವೇರಿಸಿದರು. ಆ ಸಮಯದಲ್ಲಿ ನಾಗದೇವರಿಗೆ ಆಶ್ಲೇಷಾ ಬಲಿ, ನಾಗತಂಬಿಲ, ಕಾಳರಕ್ತೇಶ್ವರಿಗೆ ಪರ್ವ ಸೇವೆ, ಭಜನೆ, ರಂಗಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಉತ್ಸವ ಸಮಿತಿ ಗೌರವ ಸಲಹೆಗಾರ ಜಯಪ್ರಕಾಶ್ ತುಂಬೆ, ಎಂ.ಬೂಬ ಸಪಲ್ಯ ಮುಂಡಬೈಲು, ಕೆ.ಬಾಬು ಸಪಲ್ಯ ಕಾಡಬೆಟ್ಟು, ಕಾರ್ಯಾಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ಪ್ರಧಾನ ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ, ಕಾವಳಪಡೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಭಜನಾ ಮಂಡಳಿ ಅಧ್ಯಕ್ಷ ಜಯ ಪೂಜಾರಿ, ಪಂಜಿಕಲ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ಪ ಕುಲಾಲ್, ಉದ್ಯಮಿ ಜಗದೀಶ ಪೂಜಾರಿ ಕರೆಂಕಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಟಿ.ಸುಧಾಕರ್ ರಾಯಿ, ಗ್ರಾ.ಪಂ.ಸದಸ್ಯ ರವೀಂದ್ರ ಸಪಲ್ಯ ನರಿಕೊಂಬು, ತಾ.ಪಂ.ಮಾಜಿ ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ ಮತ್ತಿತರರು ಉಪಸ್ಥಿತರಿದ್ದರು. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಭೇಟಿ ನೀಡಿದರು.