Thursday, May 1, 2025
Homeಮೂಡುಬಿದಿರೆಪುತ್ತೆ ಬ್ರಹ್ಮಕಲಶ: ಶ್ರೀ ಸೋಮನಾಥೇಶ್ವರ ದೇವರ ಲಿಂಗ ಪುನಃ ಪ್ರತಿಷ್ಠೆ

ಪುತ್ತೆ ಬ್ರಹ್ಮಕಲಶ: ಶ್ರೀ ಸೋಮನಾಥೇಶ್ವರ ದೇವರ ಲಿಂಗ ಪುನಃ ಪ್ರತಿಷ್ಠೆ

ಮೂಡುಬಿದಿರೆ: ಮಹತೋಭಾರ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನ ಪುನರ್ ಪ್ರತಿಷ್ಠಾ, ಅಷ್ಟಬಂಧ ಬ್ರಹ್ಮಕಲಶೋತ್ಸವದ (ಪುತ್ತೆ ಬ್ರಹ್ಮಕಲಶ) ಪ್ರಯುಕ್ತ ಶನಿವಾರ ಹಾಗೂ ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಭಾನುವಾರ ಬೆಳಗ್ಗೆ ಶ್ರೀ ಸೋಮನಾಥೇಶ್ವರ ದೇವರ ಲಿಂಗ ಪ್ರತಿಷ್ಠೆ ನಡೆಯಿತು.

ದೇವಳದ ಅನುವಂಶೀಯ ಆಡಳಿತ ಮೊಕ್ತೇಸರ, ಚೌಟರ ಅರಮನೆಯ ಕುಲದೀಪ ಎಂ., ಬ್ರಹ್ಮ ಕಲಶ ಸಮಿತಿಯ ಪದಾಧಿಕಾರಿಗಳಾದ ನೀಲೇಶ್ ಶೆಟ್ಟಿ, ಶಿವಪ್ರಸಾದ್ ಆಚಾರ್ಯ, ಅಡಿಗಳ್ ಪಿ. ಅನಂತಕೃಷ್ಣ ಭಟ್, ಎಚ್.ಧನಕೀರ್ತಿ ಬಲಿಪ, ವಿದ್ಯಾ ರಮೇಶ್ ಭಟ್, ವಾದಿರಾಜ ಮಡ್ಮಣ್ಣಾಯ ಮತ್ತಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ `ಚತುರ್ಜನ್ಮ ಮೋಕ್ಷ’ ಯಕ್ಷಗಾನ ಬಯಲಾಟ ನಡೆಯಿತು.

RELATED ARTICLES
- Advertisment -
Google search engine

Most Popular