Tuesday, June 18, 2024
Homeಅಂತಾರಾಷ್ಟ್ರೀಯವಿಮಾನ ದುರಂತ | ಮಲಾವಿ ದೇಶದ ಉಪಾಧ್ಯಕ್ಷ ಚಿಲಿಮಾ ಸಹಿತ 10 ಮಂದಿ ದುರ್ಮರಣ

ವಿಮಾನ ದುರಂತ | ಮಲಾವಿ ದೇಶದ ಉಪಾಧ್ಯಕ್ಷ ಚಿಲಿಮಾ ಸಹಿತ 10 ಮಂದಿ ದುರ್ಮರಣ

ಲಿಲಾಂಗ್ವೆ: ವಿಮಾನ ದುರಂತವೊಂದರಲ್ಲಿ ಮಲಾವಿ ದೇಶದ ಉಪಾಧ್ಯಕ್ಷ ಸೌಲೋಸ್‌ ಚಿಲಿಮಾ ಹಾಗೂ ಇತರ 9 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಗಳಾಗಿವೆ. ಚಿಲಿಮಾ ಸಹಿತ ಒಟ್ಟು 10 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಇಂದು (ಮಂಗಳವಾರ) ಬೆಳಿಗ್ಗೆ ನಾಪತ್ತೆಯಾಗಿತ್ತು. ಇದೀಗ ಅವರೆಲ್ಲಾ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮಲಾವಿ ದೇಶದ ರಾಜಧಾನಿ ಲಿಲಾಂಗ್ವೆನಿಂದ ರಕ್ಷಣಾ ಪಡೆಯ ವಿಮಾನದಲ್ಲಿ ಚಿಲಿಮಾ ಮತ್ತಿತರರು ಪ್ರಯಾಣಿಸಿದ್ದರು. ನಿಗದಿತ ಸಮಯದಲ್ಲಿ ವಿಮಾನ ಲ್ಯಾಂಡಿಂಗ್‌ ಆಗದೆ ಆತಂಕ ಸೃಷ್ಟಿಯಾಗಿತ್ತು. ಉತ್ತರ ಲಿಲಾಂಗ್ವೆನಿಂದ ಸುಮಾರು 380 ಕಿ.ಮೀ. ದೂರದಲ್ಲಿರುವ ಮುಝುಜು ವಿಮಾನ ನಿಲ್ದಾಣದಲ್ಲಿ ಚಿಲಿಮಾ ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಂಡಿಂಗ್‌ ಆಗಬೇಕಿತ್ತು.
ಲಂಚ ಹಗರಣದ ಆರೋಪದಲ್ಲಿ ಚಿಮಿಮಾ ಅವರು 2022ರಲ್ಲಿ ಬಂಧಿತರಾಗಿದ್ದರು. ಹೀಗಾಗಿ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದರು. ಕಳೆದ ತಿಂಗಳಷ್ಟೇ ಕೋರ್ಟ್‌ ಅವರನ್ನು ದೋಷಮುಕ್ತಗೊಳಿಸಿತ್ತು.

RELATED ARTICLES
- Advertisment -
Google search engine

Most Popular