Saturday, May 24, 2025
Homeರಾಷ್ಟ್ರೀಯತಮ್ಮ ಭಾಷಣಕ್ಕೆ ಘೋಷಣೆ ಕೂಗಿ ಅಡ್ಡಿಪಡಿಸಿ ಸುಸ್ತಾಗಿದ್ದ ಪ್ರತಿಪಕ್ಷದ ಸದಸ್ಯರಿಗೆ ನೀರು ನೀಡಿದ ಮೋದಿ: ವಿಡಿಯೋ...

ತಮ್ಮ ಭಾಷಣಕ್ಕೆ ಘೋಷಣೆ ಕೂಗಿ ಅಡ್ಡಿಪಡಿಸಿ ಸುಸ್ತಾಗಿದ್ದ ಪ್ರತಿಪಕ್ಷದ ಸದಸ್ಯರಿಗೆ ನೀರು ನೀಡಿದ ಮೋದಿ: ವಿಡಿಯೋ ವೈರಲ್

ನವದೆಹಲಿ: ಲೋಕಸಭೆಯಲ್ಲಿ ತನ್ನ ಭಾಷಣಕ್ಕೆ ಅಡ್ಡಿಪಡಿಸುತ್ತಿದ್ದ ಪ್ರತಿಪಕ್ಷ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಕುಡಿಯಲು ನೀರು ನೀಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ ಪ್ರಧಾನಿ ಮೋದಿ ಭಾಷಣದ ವೇಳೆ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಲು ಆರಂಭಿಸಿದರು.
ಹಲವು ಘೋಷಣೆಗಳನ್ನು ಕೂಗುತ್ತಿದ್ದರು. ಪ್ರತಿಪಕ್ಷದ ಸದಸ್ಯರಿಗೆ ಅಲ್ಲಿಂದ ತೆರಳುವಂತೆ ಸ್ಪೀಕರ್‌ ಓಂ ಬಿರ್ಲಾ ಸೂಚಿಸಿದರೂ ಅವರು ಸ್ಥಳದಿಂದ ತೆರಳದೇ ಪ್ರತಿಭಟನೆ ಮುಂದುವರಿಸುತ್ತಲೇ ಇದ್ದರು.


ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಗೊತ್ತಾದ ಪ್ರಧಾನಿ ಮೋದಿ ತಮ್ಮ ಸುದೀರ್ಘ ಭಾಷಣ ಮುಂದುವರಿಸಿದರು. ಈ ನಡುವೆ ಕೆಲವು ಸದಸ್ಯರು ಪ್ರತಿಭಟಿಸುತ್ತಾ ಕಿರುಚಿ ಸುಸ್ತಾಗಿದ್ದರು. ಇದನ್ನು ಗಮನಿಸಿದ ಮೋದಿ ತನಗೆ ನೀಡಿದ್ದ ನೀರನ್ನು ಪ್ರತಿಪಕ್ಷದ ಸದಸ್ಯರಿಗೆ ನೀಡಿದರು. ಒಬ್ಬರು ಸದಸ್ಯರು ಅದನ್ನು ಪಡೆದು ಕುಡಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ.

ವಿಡಿಯೋ ನೋಡಲು ಈ ಲಿಂಕ್‌ ಕ್ಲಿಕ್‌ ಮಾಡಿ…

Rishi Bagree on X: “PM Modi gave a glass of drinking water to an opposition MP who was shouting slogans against him in the well https://t.co/I4tzWzcXNg” / X

RELATED ARTICLES
- Advertisment -
Google search engine

Most Popular