Saturday, May 24, 2025
Homeಮಂಗಳೂರುಪ್ರಧಾನಿ ಮೋದಿ ಮಂಗಳೂರು ರೋಡ್ ಶೋ ಸಮಯ ಬದಲಾವಣೆ

ಪ್ರಧಾನಿ ಮೋದಿ ಮಂಗಳೂರು ರೋಡ್ ಶೋ ಸಮಯ ಬದಲಾವಣೆ

ಮಂಗಳೂರು: ಚುನಾವಣಾ ಪ್ರಚಾರಕ್ಕಾಗಿ ನಗರಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಸಮಯ ಬದಲಾವಣೆಯಾಗಿದೆ. ಏ 14ರಂದು ಸಂಜೆ 7:45ಕ್ಕೆ ರೋಡ್ ಶೋ ಆರಂಭವಾಗಲಿದೆ ಎಂದು ಬಿಜೆಪಿ ಚುನಾವಣಾ ಸಂಚಾಲಕ ವಿ ಸುನಿಲ್ ಕುಮಾರ್ ತಿಳಿಸಿದ್ದಾರೆ. ಭಾನುವಾರ ಸಂಜೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿ, ಸಂಜೆ 7:45ಕ್ಕೆ ನಗರದ ನಾರಾಯಣ ಗುರು ವೃತ್ತಕ್ಕೆ ಆಗಮಿಸಲಿದ್ದಾರೆ. ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ರೋಡ್ ಶೋ ಆರಂಭವಾಗಲಿದೆ. ಲಾಲ್ ಬಾಗ್, ಬಳ್ಳಾಲ್ ಬಾಗ್, ಪಿವಿಎಸ್ ವೃತ್ತದಲ್ಲಿ ಸಾಗಿ, ನವಭಾರತ್ ವೃತ್ತದಲ್ಲಿ ರೋಡ್ ಶೋ ಕೊನೆಗೊಳ್ಳಲಿದೆ. ಸಾರ್ವಜನಿಕರು ಸಂಜೆ 6:30 ರೊಳಗೆ ರಸ್ತೆಯ ಇಕ್ಕೆಲಗಳಲ್ಲಿ ಬಂದು ನಿಂತಿರಬೇಕು ಎಂದು ಅವರು ವಿನಂತಿಸಿದ್ದಾರೆ.

RELATED ARTICLES
- Advertisment -
Google search engine

Most Popular