4 ವರ್ಷದ ಮಗುವಿನ ಮೇಲೆ ಲೈಂಗಿಕ ಕಿರುಕುಳದ ಆರೋಪ | ಮಲಯಾಳಂ ನಟನ ವಿರುದ್ಧ ಪೋಕ್ಸೊ ಕೇಸು

0
235

ಕೊಚ್ಚಿ: ನಾಲ್ಕು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಮಲಯಾಳಂ ನಟರೊಬ್ಬರ ಮೇಲೆ ಕೇಳಿಬಂದಿದೆ. ಕೇರಳದ ಕೋಝಿಕ್ಕೋಡ್‌ನಲ್ಲಿ ನಟ ಕೂಟಿಕಲ್‌ ಜಯಚಂದ್ರನ್‌ ಎಂಬಾತನ ಮೇಲೆ 4 ವರ್ಷದ ಮಗುವಿಗೆ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.
ತಮ್ಮ ಕುಟುಂಬದೊಳಗಿನ ವಿವಾದದ ಲಾಭ ಪಡೆದು ನಟ ತನ್ನ ನಾಲ್ಕು ವರ್ಷದ ಮಗಳಿಗೆ ಕಿರುಕುಳ ನೀಡಿದ್ದಾನೆ ಎಂದು ಮಗುವಿನ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ನ ಜಯಚಂದ್ರನ್‌ ಮಿಮಿಕ್ರಿ ಕಲಾವಿದರೂ ಆಗಿದ್ದು, ಕಿರುತೆರೆಯಲ್ಲೂ ನಟಿಸಿದ್ದಾರೆ. ದೃಶ್ಯಂ, ನಜಾನ್‌, ಒದು ಸೆಕೆಂಡ್‌ ಕ್ಲಾಸ್‌ ಯಾತ್ರ, ಲಕ್ಷ್ಯಮ್‌, ನಾರದನ್‌, ಮೈ ಬಾಸ್‌, ಡಿಟೆಕ್ಟಿವ್‌ ಸೇರಿದಂತೆ ಹಲವು ಸಿನೆಮಾದಲ್ಲಿ ಅವರು ನಟಿಸಿದ್ದಾರೆ.

LEAVE A REPLY

Please enter your comment!
Please enter your name here