Monday, January 20, 2025
Homeರಾಜ್ಯಜಿಲ್ಲಾ ಬರಹಗಾರರ ಸಂಘ(ರಿ) ಹೂವಿನ ಹಡಗಲಿ, ಜಿಲ್ಲಾ ಘಟಕ ಉಡುಪಿ ವತಿಯಿಂದ ನಡೆದ ಕವಿಗೋಷ್ಠಿ

ಜಿಲ್ಲಾ ಬರಹಗಾರರ ಸಂಘ(ರಿ) ಹೂವಿನ ಹಡಗಲಿ, ಜಿಲ್ಲಾ ಘಟಕ ಉಡುಪಿ ವತಿಯಿಂದ ನಡೆದ ಕವಿಗೋಷ್ಠಿ

ಬರಹಗಾರರ ಸಂಘ (ರಿ) ಕೇಂದ್ರ ಘಟಕ ಹೂವಿನ ಹಡಗಲಿ, ಜಿಲ್ಲಾ ಘಟಕ ಉಡುಪಿ ಇವರ ವತಿಯಿಂದ ಹೋಟೆಲ್ ಸಿದ್ದಾರ್ಥ್, ಉಡುಪಿ ಇಲ್ಲಿ ಕವಿಗೋಷ್ಠಿ ಕಾರ್ಯಕ್ರಮವು ದಿನಾಂಕ 01-12-2024 ರ ರವಿವಾರದಂದು ಬಹಳ ಅಚ್ಚುಕಟ್ಟಾಗಿ ನಡೆಯಿತು.
ಈವೊಂದು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕವಿಗೋಷ್ಠಿ ಅಧ್ಯಕ್ಷರಾಗಿ ಆಗಮಿಸಿದ ದಯಾನಂದ್ ಶೆಟ್ಟಿ ದೆಂದೂರು, ತುಳು ಹಾಗೂ ಕನ್ನಡ ಸಾಹಿತಿಗಳು ಮತ್ತು ಅಧ್ಯಕ್ಷರು ಜಾನಪದ ಸಾಹಿತ್ಯ, ಕಾಪು ಇವರು ಎಲ್ಲಾ ಕವಿಗಳ/ಕವಯಿತ್ರಿಯರ ಕವನಗಳನ್ನು ಆಲಿಸಿ ಎಲ್ಲರನ್ನು ಅಭಿನಂದಿಸಿ ಮಾತನಾಡಿ ಕನ್ನಡದ ಅಳಿವು ಉಳಿವು ನಮ್ಮ ಕನ್ನಡಿಗರ ಮೇಲಿದೆ, ಅದೇ ರೀತಿ ಇತರೆ ಭಾಷೆಗಳ ಸಾಹಿತ್ಯವನ್ನು ಕೂಡ ನಾವು ಗೌರವಿಸಬೇಕೆಂದು, ಬರಹಗಾರರು, ಸಾಹಿತಿಗಳು, ಕವಿಗಳು ಕಾವ್ಯ ರಚಿಸಿ ಯಾವುದೋ ಮೂಲೆಗೆ ಎಸೆಯದೆ ತಮ್ಮ ತಮ್ಮ ಕವನ ಸಂಕಲನಗಳನ್ನು ಮಾಡಿಕೊಂಡು ಸಾಹಿತ್ಯ ಮೇಳ, ಕವಿಗೋಷ್ಠಿಯಲ್ಲಿ ಭಾಗವಹಿಸಿ ಕನ್ನಡ ಬರಹಗಳನ್ನು ಬೆಳೆಸಬೇಕು ಎಂದು ತಾನು ಬರೆದ ತುಳು ಕವನವನ್ನು ಕೂಡ ವಾಚಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಲೇಖಕರು ಹಾಗೂ ಪತ್ರಕರ್ತರಾದ ಪ್ರಕಾಶ್ ಸುವರ್ಣ ಕಟಪಾಡಿ ಇವರು ಮಾತನಾಡಿ ಪ್ರತಿ ಕವಿಮನಸುಗಳಿಗೆ ತುಂಬು ಮನದಿಂದ ಹಾರೈಸಿ ತುಳು ಪದ್ಯವನ್ನು ಹಾಡಿ ಎಲ್ಲರನ್ನು ರಂಜಿಸಿದರು. ಮತ್ತೊರ್ವ ಅಥಿತಿಯಾಗಿ ಆಗಮಿಸಿದ ಸಮಾಜ ಸೇವಕರು, ನಾಟಿ ವೈದ್ಯರಾದ ಪದ್ಮನಾಭ ಕೋಟ್ಯಾನ್ ರವರು ಮಾತನಾಡಿ ಬರಹಗಾರರ ಸಂಘದ ಮೇಲಿರುವ ತಮ್ಮ ಗೌರವ, ಅಭಿಮತವನ್ನು ವ್ಯಕ್ತಪಡಿಸಿದರು. ಕವಯಿತ್ರಿ/ಕವಿಗಳಾದ ಸೌದಾಮಿನಿ ರಾವ್, ಭಾಗ್ಯಶ್ರೀ ಕಂಬಳಕಟ್ಟ, ಶರಣ್ಯ ಬೆಳುವಾಯಿ, ವೈಷ್ಣವಿ ಸುಧೀಂದ್ರ ರಾವ್, ಅರ್ಚನಾ, ಸರಿತಾ ಅಂಬರೀಶ್ ಕುತ್ಪಾಡಿ, ಶೋಭಾ ದಿನೇಶ್ ಉದ್ಯಾವರ, ಅರವಿಂದ್ ಬಾಯರಿ, ಚಂದ್ರಿಕಾ ಬಾಯರಿ, ನಾಗರತ್ನ ಅತ್ತಿಮನೆ ಮೊಗೇರಿ, ವಾಣಿಶ್ರೀ ಅಶೋಕ್ ಐತಾಳ್, ಗಿರೀಶ್ ಪೆರಿಯಡ್ಕ, ಮಂಜುನಾಥ್ ಗುಂಡ್ಮಿ, ಅಶ್ವಿನಿ ಕುಲಾಲ್ ಕಡ್ತಲ, ಶಾಲಿನಿ ಕೆಮ್ಮಣ್ಣು, ಮಾಲತಿ ರಮೇಶ್ ಕೆಮ್ಮಣ್ಣು, ವೀಣಾ ಪ್ರಭಾಕರ್, ಇನ್ನೂ ಮುಂತಾದರು ಕವನ ವಾಚನ ಮಾಡಿ ಸಾಹಿತ್ಯ ಪ್ರೇಮಿಗಳನ್ನು ರಂಜಿಸಿದರು. ಈ ಕವಿಗೋಷ್ಠಿಯೊಂದಿಗೆ ಮಧ್ಯೆ ಮಧ್ಯೆ ರಸ ಪ್ರಶ್ನೆಗಳನ್ನು ಕೇಳಿ ವಿಜೇತರಾದವರಿಗೆ ಬಹುಮಾನವನ್ನು ಸಹ ನೀಡಲಾಯಿತು. ಬಳಗದ ಪ್ರಧಾನ ಕಾರ್ಯದರ್ಶಿಗಳಾದ ಕು. ಸರಸ್ವತಿ ಕೋಟೇಶ್ವರ ಹಾಗೂ ಸಂಘಟನಾ ಕಾರ್ಯದರ್ಶಿಗಳಾದ ಯಶೋದಾ ಗಾಣಿಗ ರವರು ಪ್ರಾರ್ಥನೆಯನ್ನು ಹಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬಳಗದ ಜಿಲ್ಲಾ ಸಂಚಾಲಕರಾದ ಅಮೃತ ಸಂದೀಪ್ ರವರು ಎಲ್ಲರನ್ನು ಸ್ವಾಗತಿಸಿದರು, ಜಿಲ್ಲಾಧ್ಯಕ್ಷರಾದ ಪುಷ್ಪ ಪ್ರಸಾದ್ ರವರು ಪ್ರಾಸ್ತವಿಕ ನುಡಿಗಳನ್ನಾಡಿದರು. ಗೌರವ ಸಲಹೆಗಾರರಾದ ಸುಮಾ ಕಿರಣ್ ರವರು ವಂದನಾರ್ಪಣೆಯನ್ನು ನೆರವೇರಿಸಿದರು. ಉಪಾಧ್ಯಕ್ಷರಾದ ದೀಪಿಕಾರವರು ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿದರು.

RELATED ARTICLES
- Advertisment -
Google search engine

Most Popular