ಬಂಟ್ವಾಳ ತಾಲ್ಲೂಕಿನ ಪೊಳಲಿ ಸಮೀಪದ ಅಡ್ಡೂರು ಫಲ್ಗುಣಿ ಸೇತುವೆ ದುರಸ್ತಿ ಹಿನ್ನೆಲೆಯಲ್ಲಿ ಭಕ್ತರಿಗೆ ಉಚಿತ್ ಮಿನಿ ಬಸ್ ಸೌಲಭ್ಯಕ್ಕೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಶುಕ್ರವಾರ ಚಾಲನೆ ನೀಡಿದರು. ಬಂಟ್ವಾಳ ಇಲ್ಲಿನ ಪೊಳಲಿ ಸಮೀಪದ ಫಲ್ಗುಣಿ ಸೇತುವೆ ದುರಸ್ತಿ ಕೆಲಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಇಲ್ಲದೆ ಪರದಾಟ ನಡೆಸುತ್ತಿದ್ದ ಸ್ಥಳೀಯ ಭಕ್ತರು ಮತ್ತು ನಾಗರಿಕರಿಗೆ ಉಚಿತ ಮಿನಿ ಬಸ್ ಸೌಲಭ್ಯ ಒದಗಿಸಲಾಗಿದ್ದು, ಇದರಿಂದಾಗಿ ಅಡ್ಡೂರು-ಪೊಳಲಿ ನಡುವೆ ಸಂಚರಿಸುವ ಭಕ್ತರಿಗೆ ಅನುಕೂಲವಾಗಲಿದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದರು. ಇಲ್ಲಿನ ಪೊಳಲಿ ಕ್ಷೇತ್ರದಲ್ಲಿ ಅಡ್ಡೂರು-ಪೊಳಲಿ ನಡುವೆ ಉಚಿತ ಮಿನಿ ಬಸ್ ಸೌಲಭ್ಯಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ಈ ಫಲ್ಗುಣಿ ಸೇತುವೆ ದುರಸ್ತಿ ಹಿನ್ನೆಲೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಈಚೆಗೆ ಆದೇಶಿಸಿದ್ದರು. ಪ್ರಮುಖರಾದ ವೆಂಕಟೇಶ್ ನಾವಡ ಪೊಳಲಿ, ಭುವನೇಶ್ ಪಚಿನಡ್ಕ, ಚಂದ್ರಹಾಸ ಪಲ್ಲಿಪಾಡಿ, ಸುಕೇಶ್ ಚೌಟ, ಚಂದ್ರಶೇಖರ್ ಶೆಟ್ಟಿ, ಲೋಕೇಶ್ ಭರಣಿ, ಯಶಂವತ್ ಕೊಟ್ಯಾನ್ ಪೊಳಲಿ, ಸುಬ್ರಾಯ ಕಾರಂತ್, ಯಶೋಧರ ಪೊಳಲಿ ಕಲ್ಕುಟ , ಸಚಿನ್ ಅಡಪ, ಹರೀಶ್ ಬಳ್ಳಿ ಗುರುಪುರ, ಅಶೋಕ್ ಬಡಕಬೈಲ್, ಸುರೇಶ್ ಮಣಿಕಂಠಪುರ , ಸಂದೀಪ್ ಪೊಳಲಿ, ಕಾರ್ತಿಕ್ ಬಳ್ಲಾಲ್, ಸಂತೋಷ್ ಮಣಿಕಂಠಪುರ, ಜಯಶ್ರೀ ಕರ್ಕೆರ, ಚಂದ್ರವತಿ ಪೊಳಲಿ, ವಾಮನ ಆಚಾರ್ಯ , ರೋಶನ್ ಗರೋಡಿ, ನವೀನ್ ಪೊಳಲಿ ಮತ್ತಿತರರು ಇದ್ದರು.