ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋದನಾ ಕೇಂದ್ರ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್. ಆರ್. ಹೆಗ್ಡೆ ಪ್ರಶಸ್ತಿ ಪ್ರದಾನ 2022 ಸಮಾರಂಭವು ನವೆಂಬರ್ 19 2022 ಶನಿವಾರ ಬೆಳ್ಳಿಗ್ಗೆ 10.30ಕ್ಕೆ ನೂತನ ರವೀಂದ್ರ ಮಂಟಪ ಎಂ. ಜಿ. ಎಂ. ಕಾಲೇಜು ಆವರಣ ಉಡುಪಿಯಲ್ಲಿ ನಡೆಯಲಿದೆ.
|ಈ ಕಾರ್ಯಕ್ರಮದ ಪ್ರಶಸ್ತಿ ಪುರಸ್ಕೃತರು ವಿಶ್ರಾಂತ ಕುಲಪತಿಗಳು , ಜಾನಪದ ತಜ್ಙರು ಸಂಶೋಧಕರು ಆದ ಡಾ. ಕೆ. ಚಿನ್ನಪ್ಪ ಗೌಡರಿಗೆ ಲಭಿಸಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಬಿ. ಎ ವೀವೆಕ ರೈ ನಿವೃತ ಕುಲಪತಿಗಳು ಜಾನಪದ ವಿದ್ವಾಂಸರು ವಹಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಉಪನ್ಯಾಸಕರಾದ ಡಾ. ಸುಧಾರಾಣಿ ಅಭಿನಂದನೆ ಸಲ್ಲಿಸಲಿದ್ದಾರೆ ಹಾಗೂ ಜಾನಪದ ಮತ್ತು ಸಂಸ್ಕೃತಿ ಬಗ್ಗೆ ಮಾಣಿ ಪ.ಪೂ. ಕಾಲೇಜಿನ ಪ್ರಾಶುಂಪಾಲರಾದ ಡಿ. ಯದುಪತಿ ಗೌಡ ವಿಶೇಷ ಉಪನ್ಯಾಸ ನೀಡಲಿದ್ದಾರೆ ಮತ್ತು ಚೇಳ್ಯಾರುಗುತ್ತು ಎಸ್. ಆರ್. ಹೆಗ್ಡೆ ಚಾರೀಟೇಬಲ್ ಟ್ರಸ್ಟ್ (ರಿ) ಅಧ್ಯಕ್ಷರಾದ ಡಾ. ಇಂದಿರಾ ಹೆಗ್ಡೆ ಉಪಸ್ಥಿತರಿರುವರು.