ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಈ ಬಾರಿ 29 ದಿನಗಳ ಜಾತ್ರೆಗೆ ಶುಕ್ರವಾರ ಸಾಂಪ್ರದಾಯಿಕ ರೀತಿಯಲ್ಲಿ ಚಾಲನೆ ನೀಡಲಾಯಿತು.
ಇಲ್ಲಿನ ಸಂಪ್ರದಾಯದಂತೆ ದೈವ ವೇಷಧಾರಿ ಪಾತ್ರಿ ವಾಲಗ ಊದುವ ಶೇರಿಗಾರನ ಕಿವಿಯಲ್ಲಿ ಗುಟ್ಟಾಗಿ ’29 ಪೋಪಿನಾನಿ ಐತಾರ ದಿನತ್ತಾನಿ ಆರಡ’ ಎನ್ನುವ ಮೂಲಕ 29 ದಿನಗಳ ಜಾತ್ರೆ ಎಂದು ಪ್ರಕಟಿಸಿದರು.
ಐದು ದಿನ ಚೆಂಡು: ಶುಕ್ರವಾರ ಜಾತ್ರೆ ಆರಂಭಗೊಂಡಿದ್ದು ಏಪ್ರಿಲ್ 6ರಂದು ಮೊದಲ ಚೆಂಡು, 7ರಂದು ಎರಡನೇ ಚೆಂಡು, 8ರಂದು ಮೂರನೇ ಚೆಂಡು, 9ರಂದು ನಾಲ್ಕನೇ ಚೆಂಡು, 10ರಂದು ಕಡೇ ಚೆಂಡು, 11ರಂದು ಮಹಾರಥೋತ್ಸವ ಮತ್ತು 12ರಂದು ಅವಭೃತ ಸ್ನಾನ (ಆರಡ) ನಡೆಯಲಿದೆ.
ಪ್ರತಿ 5 ದಿನಗಳಿಗೊಮ್ಮೆ ದಂಡಮಾಲೆ, ಕೋಳಿಗುಂಟ, ಜಾತ್ರೆ ಬಳಿಕ ಕೊಡಮಣಿತ್ತಾಯಿ-ಉಳ್ಳಾಕ್ಲು-ಮಗೃಂತಾಯಿ-ಬಂಟ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.