Sunday, July 14, 2024
Homeಅಪರಾಧಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡುವ ಶೋಕಿವಾಲಾರ ವಿರುದ್ಧ ಪೊಲೀಸ್ ಕ್ರಮ; ಒಂದೇ ತಿಂಗಳಲ್ಲಿ 9 ಪ್ರಕರಣ

ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡುವ ಶೋಕಿವಾಲಾರ ವಿರುದ್ಧ ಪೊಲೀಸ್ ಕ್ರಮ; ಒಂದೇ ತಿಂಗಳಲ್ಲಿ 9 ಪ್ರಕರಣ

ಕಲಬುರಗಿ: ರೀಲ್ಸ್ ಗಳಲ್ಲಿ ಸಿಕ್ಕ ಸಿಕ್ಕ ಮಾರಕಾಸ್ತ್ರ ಹಿಡಿದು ಶೋಕಿ ಮಾಡುವ ಯುವಕರಿಗೆ ಪೊಲೀಸರು ಸರಿಯಾದ ಬಿಸಿ ಮುಟ್ಟಿಸಿದ್ದಾರೆ. ಕಲಬುರಗಿ ಜಿಲ್ಲಾ ಪೊಲೀಸ್ ಇಲಾಖೆ ಒಂದೇ ತಿಂಗಳಲ್ಲಿ ಇಂತಹ ಒಂಬತ್ತು ಪ್ರಕರಣ ದಾಖಲಿಸಿ ರಾಜ್ಯದಲ್ಲಿ ಮೊದಲ ಬಾರಿ ಗಮನ ಸೆಳೆದಿದೆ. ರೀಲ್ಸ್ ಮುಖಾಂತರ ಸಮಾಜದಲ್ಲಿ ಭಯ ಹುಟ್ಟಿಸುವ ಶೋಕಿವಾಲಾಗಳಿಗೆ ಪೊಲೀಸರು ಬಿಸಿಮುಟ್ಟಿಸಿದ್ದಾರೆ. ರೀಲ್ಸ್ ಗಳಲ್ಲಿ ಇಂತಹ ದುಸ್ಸಾಹಸ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಹಾಗೊಂದು ವೇಳೆ ಮುಂದೆಯೂ ಇದೇ ರೀತಿ ಮುಂದುವರಿದರೆ ಕಾನೂಕು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಎಲ್ಲಾ ರೀಲ್ಸ್ ಶೋಕಿವಾಲಾರಿಗೆ ಎಚ್ಚರಿಸಲಾಗಿದೆ. ವಿಲನ್ ಗಳು ತೋರಿಸಿದಂತೆ ಗನ್ ಹಿಡಿದು ವಿಲನ್ ಗಳ ಡೈಲಾಗ್ ಗಳಿಗೆ ಲಿಪ್ ಸಿಂಗ್ ಮಾಡಿ ಗನ್ ಪ್ರದರ್ಶಿಸುವ ಹಾಗೂ ಬರ್ತ್ ಡೇ ಪಾರ್ಟಿಗಳಲ್ಲಿ ಉದ್ದ ತಲ್ವಾರ್ ಅಥವಾ ಮಾರಕಾಸ್ತ್ರಗಳಿಂದ ಕೇಕ್ ಕತ್ತರಿಸುವ ಮತ್ತು ಮಾರಕಾಸ್ತ್ರ ಕೈಯಲ್ಲಿ ಹಿಡಿದುಕೊಂಡು ಮೈ ಮೇಲೆ ಪ್ರಜ್ಞೆ ಇಲ್ಲದಂತೆ ಕುಣಿಯುವ ರೀಲ್ಸ್ ಮಾಡುವವರಿಗೆ ಈ ಎಚ್ಚರಿಕೆ ನೀಡಲಾಗಿದೆ.
ಜಿಲ್ಲೆಯ ಸೇಡಂನಲ್ಲಿ ಎರಡು, ಅಫಜಲಪುರ, ವಾಡಿ, ಜೇವರ್ಗಿ, ಯಡ್ರಾಮಿ, ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಸ್ತ್ರಾಸ್ತ್ರ ಹಿಡಿದು ರೀಲ್ಸ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

RELATED ARTICLES
- Advertisment -
Google search engine

Most Popular