ರೈಲಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಖತರ್ನಾಕ್‌ ಪ್ಲಾನ್‌ ಬಹಿರಂಗ: ಸಿಬ್ಬಂದಿಯೇ ಭಾಗಿ!; ಒಬ್ಬ ಅರೆಸ್ಟ್;‌ ಇನ್ನಿಬ್ಬರು ಪರಾರಿ

0
294

ಬೆಂಗಳೂರು: ದಿಂಬು, ಬೆಡ್‌ ಶೀಟ್‌ಗಳಲ್ಲಿ ಗಾಂಜಾವನ್ನಿಟ್ಟು ಸಾಗಾಟ ಮಾಡುತ್ತಿದ್ದ ಒಬ್ಬ ರೈಲ್ವೆ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೈಯಪ್ಪನಹಳ್ಳಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ತ್ರಿಪುರ ಮೂಲದ ದೀಪನ್‌ ದಾಸ್‌ ಬಂಧಿತ ಯುವಕ. ತ್ರಿಪುರ ಮೂಲದ ಸುಮನ್‌ ಹಾಗೂ ಬೆಂಗಳೂರಿನ ಬಿಸ್ವಜಿತ್‌ ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದ ಆರೋಪಿ ಕಾಂಟ್ರಾಕ್ಟ್‌ ಆಧಾರದ ಮೇಲೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡತ್ತಿದ್ದನು. ಆರೋಪಿಗಳು ಎಸ್‌ಎಂವಿಟಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ದಿಂಬು ಹಾಗೂ ಬೆಡ್‌ಶೀಟ್‌ ಒಳಗೆ ಗಾಂಜಾವನ್ನಿಟ್ಟು ಆರೋಪಿಗಳು ಸಾಗಾಟ ಮಾಡುತ್ತಿದ್ದರು. ರೈಲಿನಲ್ಲಿ ದಿಂಬು, ಬೆಡ್‌ಶೀಟ್‌ಗಾಗಿ ಬೇರೆ ಕಂಪಾರ್ಟ್‌ಮೆಂಟ್‌ ಇರುತ್ತದೆ. ಈ ಕಂಪಾರ್ಟ್‌ಮೆಂಟ್‌ನಲ್ಲಿ ಗಾಂಜಾ ಇಡುತ್ತಿದ್ದರು. ಈ ಬಗ್ಗೆ ರೈಲ್ವೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಆರೋಪಿಗಳಿಂದ 32.88 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here