Monday, May 19, 2025
Homeಅಪರಾಧಕೇರಳದ ಚಿತ್ರ ನಿರ್ಮಾಪಕನ ಮನೆಯಿಂದ ಕಳವುಗೈದ 1 ಕೋಟಿ ರೂ ಮೌಲ್ಯದ ಚಿನ್ನಾಭರಣ ಸಾಗಿಸುತ್ತಿದ್ದ ವೇಳೆ...

ಕೇರಳದ ಚಿತ್ರ ನಿರ್ಮಾಪಕನ ಮನೆಯಿಂದ ಕಳವುಗೈದ 1 ಕೋಟಿ ರೂ ಮೌಲ್ಯದ ಚಿನ್ನಾಭರಣ ಸಾಗಿಸುತ್ತಿದ್ದ ವೇಳೆ ಕೋಟದಲ್ಲಿ ಆರೋಪಿ ಪೊಲೀಸ್ ವಶಕ್ಕೆ

ಕೋಟ: ಕೇರಳದ ಖ್ಯಾತ ಚಿತ್ರ ನಿರ್ಮಾಕರೊಬ್ಬರ ಮನೆಯಲ್ಲಿ ಕಳವುಗೈದ ಚಿನ್ನಾಭರಣ ರಾಜ್ಯದ ಕೋಟ ಮೂರ್ಕೈ ಸಮೀಪ ವಶಕ್ಕೆ ಪಡೆಯಲಾಗಿದೆ. ಸುಮಾರು 1.2 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದ್ದು, ಚಿನ್ನವನ್ನು ಉಡುಪಿ-ಕಾರವಾರ ಮಾರ್ಗವಾಗಿ ಸಾಗಿಸುತ್ತಿದ್ದಾಗ ಪೊಲೀಸರರು ತಡೆಹಿಡಿದಿದ್ದಾರೆ. ಬಂಧಿತನನ್ನು ಬಿಹಾರದ ಸೀತಾಮರ್ಹಿ ಜಿಲ್ಲೆಯ ನಿವಾಸಿ ಮೊಹಮ್ಮದ್ ಇರ್ಫಾನ್ ಎಂದು ಗುರುತಿಸಲಾಗಿದೆ. ಮಲಯಾಳಂ ಚಿತ್ರ ನಿರ್ಮಾಪಕ ಜೋಶಿ ಅವರ ಕೊಚ್ಚಿ ಮನಂಪಲ್ಲಿಯ ಮನೆಯಿಂದ ಆರೋಪಿ ಕಳ್ಳತನ ಮಾಡಿದ್ದಾನೆ. ಯಾರೂ ಇಲ್ಲದ ವೇಳೆ ಅಡುಗೆ ಕೋಣೆಯ ಬಾಗಿಲು ಮುರಿದು ಬಂಧಿತ ಆರೋಪಿ ಮನೆಯೊಳಗೆ ನುಗ್ಗಿ ಕಪಾಟು ಒಡೆದು ಕಳ್ಳತನ ಮಾಡಿದ್ದಾನೆ. ಸುಮಾರು 1 ಕೋಟಿ ರೂ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಈತ ಪರಾರಿಯಾಗುತ್ತಿದ್ದ. ಕಳವುಗೈದ ಆಭರಣವನ್ನು ಬಿಹಾರಕ್ಕೆಎ ಸಾಗಿಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಕೋಟ ಪೊಲೀಸರು ಕಾರು ತಡೆದು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಕಳವು ಕೃತ್ಯ ಬಯಲಾಗಿದೆ. ಕೇರಳ ಪೊಲೀಸರು ಉಡುಪಿಗೆ ಬಂದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

RELATED ARTICLES
- Advertisment -
Google search engine

Most Popular