Tuesday, May 13, 2025
Homeಮಂಗಳೂರುಮಂಗಳೂರು | ಪೊಲೀಸರ ಮೇಲೆಯೇ ʻಚಡ್ಡಿ ಗ್ಯಾಂಗ್‌ʼ ದಾಳಿ: ಪೊಲೀಸರಿಂದ ಇಬ್ಬರ ಕಾಲಿಗೆ ಗುಂಡೇಟು!

ಮಂಗಳೂರು | ಪೊಲೀಸರ ಮೇಲೆಯೇ ʻಚಡ್ಡಿ ಗ್ಯಾಂಗ್‌ʼ ದಾಳಿ: ಪೊಲೀಸರಿಂದ ಇಬ್ಬರ ಕಾಲಿಗೆ ಗುಂಡೇಟು!

ಮಂಗಳೂರು: ಜಿಲ್ಲೆಯಲ್ಲಿ ಭಾರೀ ಆತಂಕವನ್ನುಂಟು ಮಾಡಿದ್ದ ದರೋಡೆಕೋರರ ಗುಂಪು ಚಡ್ಡಿ ಗ್ಯಾಂಗ್‌ ಅನ್ನು ಉರ್ವ ಪೊಲೀಸ್‌ ಠಾಣಾ ವ್ಯಾಪ್ತಿಯ ಕೋಟೆಕಣಿಯಲ್ಲಿ ಮಂಗಳವಾರ ಬೆಳಗಿನ ಮನೆಯೊಂದರಲ್ಲಿ ಕಳ್ಳತನ ಮಾಡಿ ಪರಾರಿಯಾದ ಐದೇ ಗಂಟೆಗಳಲ್ಲಿ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಆರೋಪಿಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ಮಂಗಳವಾರ ಸಂಜೆ ಮಂಗಳೂರಿಗೆ ಕರೆ ತರಲಾಗಿತ್ತು.
ದರೋಡೆ ನಡೆಸಿದ ಬಳಿಕ ಮನೆಯವರ ಕಾರನ್ನು ಹಿಡಿದುಕೊಂಡು ಗ್ಯಾಂಗ್‌ ಪರಾರಿಯಾಗಿತ್ತು. ಮೂಲ್ಕಿ ಕಡೆ ಕಾರಿನಲ್ಲಿ ಪ್ರಯಾಣಿಸಿ, ಬಳಿಕ ಕಾರನ್ನು ಒಂದು ಪ್ರದೇಶದಲ್ಲಿ ಬಿಟ್ಟು ಹೋಗಿತ್ತು. ಅದೇ ಸ್ಥಳದಲ್ಲಿ ಇಂದು ಮುಂಜಾನೆ ಮಹಜರಿಗೆಂದು ಗ್ಯಾಂಗ್‌ ಸದಸ್ಯರನ್ನು ಕರೆದೊಯ್ದಾಗ ಆರೋಪಿಗಳು ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಅವರ ಕಾಲಿಗೆ ಗುಂಡು ಹಾಕಿದ ಘಟನೆ ನಡೆದಿದೆ. ಪೊಲೀಸರ ಗುಂಡೇಟಿನಿಂದ ಇಬ್ಬರು ಆರೋಪಿಗಳ ಕಾಲಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಹಾನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ಹೇಳಿದ್ದಾರೆ.
ಪಡುಪಣಂಬೂರು ಬಳಿ ಘಟನೆ ನಡೆದಿರುವುದಾಗಿ ಮಾಹಿತಿ ಲಭಿಸಿದೆ.
ಬಂಧಿತರೆಲ್ಲರೂ ಮಧ್ಯಪ್ರದೇಶ ಮೂಲದವರಾಗಿದ್ದು, ರಾಜು ಸಿಂಗ್ವಾನಿಯಾ (24), ಮಯೂರ್‌ (30), ಬಾಲಿ (22), ವಿಕ್ಕಿ (21) ಎಂದು ಗುರುತಿಸಲಾಗಿದೆ.
ಮಂಗಳೂರಿನಲ್ಲಿ ಮನೆಯೊಂದರಲ್ಲಿ ರಾತ್ರಿ ವೇಳೆ ಕಿಟಕಿ ಮುರಿದು ನುಗ್ಗಿದ್ದ ಕಳ್ಳರು, ಆ ಮನೆಯವರು ಮಲಗಿದ್ದಾಗಲೇ ಕಳ್ಳತನ ಮಾಡಿದ್ದರು. ಆ ಮನೆಯ ಪಕ್ಕದ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಚಲನವಲನ ದಾಖಲಾಗಿದ್ದು, ಮೈಮೇಲೆ ಚಡ್ಡಿ ಹಾಗೂ ಬನಿಯನ್‌ ಮಾತ್ರ ಧರಿಸಿ ಓಡಾಡಿದ್ದು ಕಂಡುಬಂದಿತ್ತು. ಹೀಗಾಗಿ ಈ ಗ್ಯಾಂಗ್‌ ಅನ್ನು ಚಡ್ಡಿ ಗ್ಯಾಂಗ್‌ ಎಂದು ಹೆಸರಿಸಲಾಗಿತ್ತು. ಅದರ ಬಳಿಕ ಕೋಟೆದಕಣಿ ಬಳಿ ಇನ್ನೊಂದು ಮನೆಯಲ್ಲಿ ಇದೇ ಮಾದರಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಗುಂಪನ್ನು ಕೇವಲ ಐದು ಗಂಟೆಗಳಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳೂರು ಪೊಲೀಸರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

RELATED ARTICLES
- Advertisment -
Google search engine

Most Popular