Thursday, December 5, 2024
Homeಮುಲ್ಕಿಪೊಂಪೈ : ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ

ಪೊಂಪೈ : ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ

ಪೊಂಪೈ ಕಾಲೇಜಿನ 2024-25 ನೇ ಸಾಲಿನ ರಕ್ಷಕ -ಶಿಕ್ಷಕ ಸಂಘದ ವಾರ್ಷಿಕ ಮಹಾ ಸಭೆಯು ಕಾಲೇಜಿನ ಪ್ರೊವಿಡೆನ್ಸ್ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಗಳ ಪ್ರಗತಿಯಲ್ಲಿ ವಿದ್ಯಾರ್ಥಿಗಳು ಹೆತ್ತವರು ಹಾಗೂ ಅಧ್ಯಾಪಕರ ಪಾತ್ರ ಸಮಾನವಾದುದು.ಕಾಲೇಜಿನ ಅಭಿವೃದ್ಧಿಗೆ ಕಾರಣವಾದ ಪೋಷಕರ ಪ್ರೋತ್ಸಾಹ ಇನ್ನು ಮುಂದೆಯೂ ಇರಲಿ, ವಿದ್ಯಾರ್ಥಿಗಳ ಭವಿಷ್ಯವನ್ನು ಸದೃಡಗೊಳಿಸಲು ಆಡಳಿತ ಮಂಡಳಿ ಬದ್ದವಾಗಿದೆ. ಎಂದು ಕಾಲೇಜಿನ ಸಂಚಾಲಕರಾದ ರೆ. ಫಾ ಒಸ್ವಾಲ್ಡ್ ಮೊಂತೇರೊ ಅವರು ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾ ಸಭೆಯ ಅಧ್ಯಕ್ಷರಾಗಿ ಮಾತಾಡಿದರು. ಸಭೆಯಲ್ಲಿ ಪ್ರಾಂಶುಪಾಲರಾದ ಡಾ. ಪುರುಷೋತ್ತಮ ಕೆ ವಿಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಕಾಲೇಜಿನ ನೀತಿ ನಿಯಮಗಳ ಬಗ್ಗೆ ತಿಳಿಸಿ ಎಲ್ಲರನ್ನೂ ಸ್ವಾಗತಿಸಿದರು. 2023-24ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ವಿನ್ಸೆಂಟ್ ಡಿ ಸೋಜರವರನ್ನು ಗೌರವಾನ್ವಿತ ಗಣ್ಯರಿಂದ ಗೌರವಿಸಿ ಸನ್ಮಾನಿಸಲಾಯಿತು. ಪದವಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ನಗದು ಬಹುಮಾನ ಮತ್ತುಪ್ರಮಾಣ ಪತ್ರ ನೀಡಲಾಯಿತು. ಕಾರ್ಯದರ್ಶಿ ಶ್ರೀಮತಿ ಆಶಿತ ಜೆ ಸಂಘದ ವರದಿ ವಾಚಿಸಿದರು. ಕೋಶಧಿಕಾರಿ ಲಿಂಡಾ ಜೆ ರೇಗೋ ಲೆಕ್ಕ ಪತ್ರ ಮಂಡನೆಗೈದರು. ಇಂಗ್ಲೀಷ್ ವಿಭಾಗದ ಪ್ರಾಧ್ಯಪಕರಾದ ಡಾ ವಿಕ್ಟರ್ ವಾಜ್ ಇ.ಸನ್ಮಾನ ಪತ್ರ ವಾಚಿಸಿದರು. ಸರಿತಾ ಮೆನೆಜಸ್ ಅಧ್ಯಕ್ಷರಾಗಿ ಮತ್ತು ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಅಸ್ಮತ್ ಆಯ್ಕೆಯಾದರು. ತರಗತಿ ಪ್ರತಿನಿಧಿಯಾಗಿ ಶ್ರೀ ಉಮೇಶ್ ಎನ್, ಅಲೆನ್ ಡಿ ಸೋಜ, ಶ್ರೀಮತಿ ವೆರೋನಿಕ ಅರನ್ಹ, ನವೀನ್ ಪುತ್ರನ್ ನೇಮಕಗೊಂಡರು. ಸಂಘದ ರಚನೆಯು ಪೋಷಕರ ಮತ್ತು ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ನಡೆಯಿತು. ಹಿಂದಿ ವಿಭಾಗದ ಪ್ರಾಧ್ಯಾಪಕರಾದ ಡಾ. ಮಂಜುನಾಥ್ ಎಸ್.ಎ ಇವರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಶ್ರೀಮತಿ ರೇಷ್ಮಾ ಮರ್ಸಿನ್ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷರಾದ ಡಾ ಗುಣಕರ್ ಎಸ್ ಧನ್ಯವಾದ ಸಲ್ಲಿಸಿದರು. ಆಡಳಿತ ಮಂಡಳಿಯ ಸದಸ್ಯರಾದ ರೋಹನ್ ಡಿ ಕೋಸ್ಟಾ , ಮಾಜಿ ಜೊತೆ ಕಾರ್ಯದರ್ಶಿ ಶೇಖರ್, ಬೋಧಕರು-ಭೋದಕೇತರರು, ಪೊಷಕರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular