Tuesday, April 22, 2025
HomeUncategorizedಪೊಂಪೈ : ಮಹಿಳಾ ದಿನಾಚರಣೆ

ಪೊಂಪೈ : ಮಹಿಳಾ ದಿನಾಚರಣೆ


ಪೊಂಪೈ ಕಾಲೇಜು ಐಕಳ ಇಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾಲೇಜಿನ ಐ.ಕ್ಯೂ.ಎ.ಸಿ ಮತ್ತು ಮಹಿಳಾ ಘಟಕದ ವತಿಯಿಂದ ಸ್ಥಳೀಯ ಸಾಧಕಿಯರನ್ನು ಗುರುತಿಸಿ ಗೌರವಿಸುವ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಮಹಿಳಾ ಸಾಧಕಿಯರು ಹಾಗೂ ಸಮಾಜ ಪರ ಸೇವೆಯಲ್ಲಿ ತೊಡಗಿಸಿರುವ ಉದ್ಯಮಿ ಡಾ. ಫ್ರೀಡಾ ರೋಡ್ರಿಗಸ್ ಮತ್ತು ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷರಾದ ಶ್ರೀಮತಿ ಹಿಲ್ಡ ಡಿ ಸೋಜಾ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರ ಮೇಲ್ವಿಚಾರಕರಾದ ಶ್ರೀಮತಿ ಶಶಿಕಲಾ ಇವರನ್ನು ಸನ್ಮಾನಿಸಲಾಯಿತು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ರೇಷ್ಮಾ ಮರ್ಸಿನ್ ಡಿಸೋಜಾ, ಇತಿಹಾಸ ವಿಭಾಗದ ಪ್ರಾಧ್ಯಾಪಕಿ ಶ್ರೀಮತಿ ಆಶಿತ ಜೆ ಮತ್ತು ಗ್ರಂಥಾಲಯ ವಿಭಾಗದ ಗ್ರಂಥಪಾಲಕಿಯಾದ ಶ್ರೀಮತಿ ವಿನೀತಾ ರೋಡ್ರಿಗಸ್ ರವರು ಸನ್ಮಾನ ಪತ್ರವನ್ನು ವಾಚಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಗೋವಿಂದದಾಸ ಕಾಲೇಜಿನ ಕನ್ನಡ ಉಪನ್ಯಾಸಕಿ ಶ್ರೀಮತಿ ಅಕ್ಷತಾ ಶೆಟ್ಟಿ ಇವರು ಸಭೆಯನ್ನುದ್ದೇಶಿಸಿ ಮಾತನಾಡಿ ಹಿಂದಿನ ಮತ್ತು ಇಂದಿನ ಮಹಿಳಾ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದರು. ಬಳ್ಕುಂಜೆ ಗ್ರಾಮದಲ್ಲಿ ಪ್ರಥಮ ಡಾಕ್ಟರೇಟ್ ಪದವಿ ಪಡೆದ ಮಹಿಳೆಯಾದ ಡಾ. ಫ್ರೀಡಾ ರೋಡ್ರಿಗಸ್ ರವರು ಮಾತನಾಡಿ ತಾನು ಡಾಕ್ಟರೇಟ್ ಪದವಿ ಪಡೆಯಲು ಪಟ್ಟ ಶ್ರಮದ ಬಗ್ಗೆ ತಿಳಿಸಿದರು. ಸನ್ಮಾನಿತರಾದ ಶ್ರೀಮತಿ ಹಿಲ್ದಾ ಡಿ ಸೋಜರವರು ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಪುರುಷೋತ್ತಮ ಕೆ. ವಿ ಯವರು ವಹಿಸಿದ್ದರು. ಕಾಲೇಜಿನ ಮಹಿಳಾ ಘಟಕದ ವತಿಯಿಂದ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಗಣ್ಯಾತಿ ಗಣ್ಯರ ಮೂಲಕ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಕೊನೆಗೆ ಮುಲ್ಕಿಯ ಎಲ್. ಐ. ಸಿ ವಿಭಾಗದ ತಂಡದವರು ಆಗಮಿಸಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಜೀವನ ವಿಮೆಯಲ್ಲಿರುವ ಯೋಜನೆ ಹಾಗೂ ಹೂಡಿಕೆಯ ಬಗ್ಗೆ ಪರಿಚಯಿಸಿ ಮಾಹಿತಿ ನೀಡಿದರು. ತೃತೀಯ ಕಲಾ ವಿಭಾಗದ ವಿದ್ಯಾರ್ಥಿನಿ ಕು. ಸನ್ನಿಧಿ ಇವರು ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಮಹಿಳಾ ಸಂಘದ ಅಧ್ಯಕ್ಷರಾದ ತೃತೀಯ ಕಲಾ ವಿಭಾಗದ ವಿದ್ಯಾರ್ಥಿನಿ ಕು. ರಕ್ಷಾ. ಆರ್ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಹಾಗೂ ಕಾಲೇಜಿನ ಮಹಿಳಾ ಘಟಕದ ಸಂಯೋಜಕಿ ರೇಷ್ಮಾಮರ್ಸಿನ್ ಡಿ ಸೋಜಾರವರು ಧನ್ಯವಾದ ಸಲ್ಲಿಸಿದರು. ಮಹಿಳಾ ಘಟಕದ ಸಹ ಸಂಯೋಜಕಿ ಶ್ರೀಮತಿ ಜ್ಯೋತಿ ಅಮೀನ್, ವಿದ್ಯಾರ್ಥಿನಿಯರು, ಬೋಧಕ ಮತ್ತು ಬೋಧಕೇತರ ವರ್ಗದವರು  ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular