ಉಡುಪಿ : ನಗರ ಸಭೆಯ ಮಾಜಿ ಅಧ್ಯಕ್ಷರಾದ ದಿ . ಮಲ್ಪೆ ಸೋಮಶೇಖರ್ ಭಟ್ ರವರ ಭಾವ ಚಿತ್ರ ಅನಾವರಣ ಕಾರ್ಯಕ್ರಮ ನಡೆಯಿತು. ಜನ ಸಂಘ ಹಾಗೂ ಬಿಜೆಪಿ ಮುಖಂಡರಾದ ದಿ (ಸೋಮಣ್ಣ) ಮಲ್ಪೆ ಸೋಮಶೇಖರ್ ಭಟ್ ಈ ಹಿಂದೆ ಉಡುಪಿ ನಗರ ಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಇಂದು ನಗರಸಭೆಯ ಸಭಾಂಗಣದಲ್ಲಿ ದಿ .( ಸೋಮಣ್ಣ)ರವರ ಭಾವ ಚಿತ್ರ ಅನಾವರಣ ವನ್ನು ಉಡುಪಿ ಶಾಸಕರಾದ ಯಶಪಾಲ್ ಸುವರ್ಣ ನೆರವೇರಿಸಿದರು. ವೇದಿಕೆಯಲ್ಲಿ ನಗರಸಭೆಯ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ , ಉಪಾಧ್ಯಕ್ಷೆ ರಜನಿ ಹೆಬ್ಬಾರ್ , ಸ್ಥಾಯೀ ಸಮಿತಿಯ ಅಧ್ಯಕ್ಷರಾದ ಸುಂದರ್ ಕಲ್ಮಾಡಿ , ಮಾಜಿ ಅಧ್ಯಕ್ಷರಾದ ಚಿತ್ತರಂಜನ್ ಹೆಗ್ಡೆ , ಕಿರಣ್ ಕುಮಾರ್ ಬೈಲೂರು , ನಗರ ಸಭಾ ಸದಸ್ಯರಾದ ರಶ್ಮಿ ಚಿತ್ತರಂಜನ್ ಭಟ್ , ವಿಜಯ್ ಕೊಡವೂರು , ಗಿರೀಶ್ ಅಂಚನ್ ,ಮೋಹನ್ ಉಪದ್ಯಾಯ ಹಾಗೂ ನಗರಸಭೆಯ ಅಧಿಕಾರಿಗಳು ಉಪಸ್ಥರಿದ್ದರು.
ನಗರ ಸಭೆಯ ಮಾಜಿ ಅಧ್ಯಕ್ಷರಾದ ದಿ . ಮಲ್ಪೆ ಸೋಮಶೇಖರ್ ಭಟ್ ರವರ ಭಾವಚಿತ್ರ ಅನಾವರಣ ಕಾರ್ಯಕ್ರಮ
RELATED ARTICLES