ಜೇಸಿಐ ಬೆಳ್ಮಣ್ ಘಟಕದ ನೇತ್ರತ್ವದಲ್ಲಿ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಚ್ಚೇರಿಪೇಟೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ “ಪೋಷಕರ ಧನಾತ್ಮಕ ಪಾಲನೆ ” ತರಬೇತಿ ಕಾರ್ಯಕ್ರಮವು ದಿನಾಂಕ 23/01/2025 ಗುರುವಾರದಂದು ನೆರವೇರಿತು.
ಕಾರ್ಯಾಗಾರವನ್ನು ವಲಯ ತರಬೇತುದಾರರಾದ ಜೇಸಿ ರಾಘವೇಂದ್ರ ಪ್ರಭು ಕರ್ವಾಲು ನಡೆಸಿಕೊಟ್ಟರು .ಈ ಸುಸಂಧರ್ಭದಲ್ಲಿ ಪ್ರಗತಿಪರ ಕೃಷಿಕರು ಹಾಗೂ ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ನಿವೃತ್ತ ಸೇವಾ ಸಿಬ್ಬಂದಿಯಾಗಿರುವ ಮೋಹನ್ ಸಮಗಾರ ರವರಿಗೆ ಜೇಸಿಐ ಬೆಳ್ಮಣ್ ಘಟಕದ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಘಟಕಾಧ್ಯಕ್ಷರಾದ ಜೇಸಿ. ಪ್ರದೀಪ್ ಶೆಟ್ಟಿ, ಸಚ್ಚೇರಿಪೇಟೆ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಲ.ಕೆ ಸತ್ಯಶಂಕರ್ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕರಾದ ಗೌರವ್ ಆರ್ ಕೆ, ವಲಯಾಧಿಕಾರಿ ಹಾಗೂ ನಿಕಟಪೂರ್ವಾಧ್ಯಕ್ಷರಾದ ಜೇಸಿ. ಸರಿತಾ ದಿನೇಶ್ ಸುವರ್ಣ, ವಲಯ ತರಬೇತುದಾರರಾದ ಜೇಸಿ. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯದರ್ಶಿ ಜೇಸಿ. ವೀರೇಂದ್ರ ಮೊದಲಾದವರಿದ್ದರು