ಅಂಚೆ ಜನ ಸಂಪರ್ಕ ಅಭಿಯಾನ

0
31

ವರದಿ ರಾಯಿ ರಾಜ ಕುಮಾರ

ವರ್ ಫ್ರೆಂಡ್ಸ್ ಬೆದ್ರ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಮೂಡುಬಿದಿರೆಯಲ್ಲಿ ಅಂಚೆ ಜನ ಸಂಪರ್ಕ ಅಭಿಯಾನವನ್ನು ಹಮ್ಮಿಕೊಂಡಿದೆ. ನವೆಂಬರ್ 16ರಂದು ಕನ್ನಡ ಭವನದಲ್ಲಿ ಬೆಳಿಗ್ಗೆ ಗಂಟೆ 9 ರಿಂದ ಸಂಜೆ ಗಂಟೆ 4ರ ತನಕ ಆಧಾರ್ ನೋಂದಣಿ, ತಿದ್ದುಪಡಿ, ಅಪಘಾತ ಹಾಗೂ ಆರೋಗ್ಯ ವಿಮಾ ಅವಕಾಶಗಳು ದೊರೆಯಲಿವ


ಹದಿನೆಂಟರಿಂದ 65 ವರ್ಷ ಪ್ರಾಯದ ತನಕ ಅಪಘಾತ ವಿಮೆ ಹಾಗೂ ಆರೋಗ್ಯ ವಿಮೆಗಳನ್ನು ಮಾಡಲು ಅವಕಾಶವಿದೆ. ಒಬ್ಬರಿಗೆ ವಾರ್ಷಿಕ ಪ್ರೀಮಿಯಂ 756 ರೂಪಾಯಿ, ಇಬ್ಬರಿಗೆ ರೂ.1247, ಮೂವರಿಗೆ 1604 ರೂಪಾಯಿ, ನಾಲ್ಕು ಮಂದಿಗೆ 1956 ರೂಪಾಯಿ ಗಳಿದ್ದು 10 ಲಕ್ಷದ ಅಪಘಾತ ವಿಮೆ ಹಾಗೂ 15 ಲಕ್ಷದ ಆರೋಗ್ಯ ವಿಮೆಗಳನ್ನು ಮಾಡಬಹುದಾಗಿದೆ. ಆದರೆ ಎಲ್ಲರ ಮೂಲ ಆಧಾರ ಕಾರ್ಡ್, ಪಾನ್ ಕಾರ್ಡ್ ಪ್ರತಿ, ಮೊಬೈಲ್ ಸಂಖ್ಯೆಗಳ ಅಗತ್ಯವಿದೆ. ಹಿಂದಿನ ಪಾಲಿಸಿ ರಿನಿವಲ್ ಗು ಅವಕಾಶವಿರುತ್ತದೆ. ಸರಕಾರದ ವಿವಿಧ ವಿಮೆ ಯೋಜನೆಗಳ ಮಾಹಿತಿಯನ್ನು ಕೂಡ ಸ್ಥಳದಲ್ಲಿ ಪಡೆಯಬಹುದಾಗಿದೆ ಎಂದು ಅಂಚೆ ಇಲಾಖೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗೆ 9611436514 / 8310825088 ನ್ನು ಸಂಪರ್ಕಿಸಬಹುದು. 
.

LEAVE A REPLY

Please enter your comment!
Please enter your name here