ಕಾರ್ಕಳ: ದಕ್ಷಿಣ ಆಫ್ರಿಕಾದ ಫೋಚೇಫಸ್ಟಮ್ ನಗರದಲ್ಲಿ ನಡೆದ ಏಷ್ಯಾ ಫೆಸಿಫಿಕ್ ಆಫ್ರಿಕನ್ (ಎರಡು ಖಂಡಗಳ ಮಟ್ಟದ) ಪವರ್ ಲಿಫ್ಟಿಂಗ್ ಮತ್ತು ಬೆಂಚ್‌ಪ್ರೆಸ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಬೋಳ ಅಕ್ಷತಾ ಪೂಜಾರಿ ಚಿನ್ನದ ಪದಕ ಗೆದ್ದಿದ್ದಾಎರ. 52 ಕೆಜಿ ದೇಹ ತೂಕದ ಸೀನಿಯರ್ ವಿಭಾಗದಲ್ಲಿ ಅಕ್ಷತಾ ಪೂಜಾರಿ ಚಿನ್ನದ ಪದಕ ಗೆದ್ದು ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾರೆ.
2011ರಲ್ಲಿ ಲಂಡನ್ ಕಾಮನ್‌ವೆಲ್ತ್ ಕೂಟದಲ್ಲಿ ಭಾಗವಹಿಸಿ 8 ಚಿನ್ನದ ಪದಕ ಪಡೆದಿದ್ದ ಅಕ್ಷತಾ ಪೂಜಾರಿ, 2012ರಲ್ಲಿ ಏಷ್ಯನ್ ಕೂಟದಲ್ಲಿ ಚಿನ್ನ, 2014ರಲ್ಲಿ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, 2018ರಲ್ಲಿ ಏಷ್ಯನ್ ದುಬಾಯಿ ಕೂಟದ ಚಿನ್ನ, 2022ರಲ್ಲಿ ಕಝಾಕ್‌ಸ್ಥಾನ ಕೂಟದಲ್ಲಿ ಸಿಲ್ವರ್ ಮತ್ತು ಈ ಬಾರಿ ಸೌಥ್ ಆಫ್ರಿಕಾ ಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಕಳೆದ 14 ವರ್ಷಗಳಿಂದ ಭಾರತದಾದ್ಯಂತ ಹಲವು ಪಂದ್ಯಕೂಟಗಳಲ್ಲಿ ಹೋದಲ್ಲೆಲ್ಲಾ ಚಿನ್ನದ ಪದಕ ಗೆದ್ದುಕೊಂಡು ಬರುತ್ತಿರುವ ಅಕ್ಷತಾ ಪೂಜಾರಿ ಮನೆ ಶೋಕೇಸಿನಲ್ಲಿ ರಾರಾಜಿಸುತ್ತಿವೆ.