ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ, ಶ್ರೀ ಲಕ್ಶ್ಮೀ ವೆಂಕಟೇಶ ಕಲಾ ಸೇವಾ ಟ್ರಸ್ಟ್ ವತಿಯಿಂದ ಆಯೋಧ್ಯ ಶ್ರೀ ರಾಮ ಮಂದಿರದ ಪ್ರಥಮ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಜ .12 ಆದಿತ್ಯವಾರ ಸಂಜೆ ಪ್ರಭಾವ ಶೀಲ ರಾಮಾಯಣ ಹಾಗೂ ಭಜನಾಮೃತ ವನ್ನು ವಿದ್ವಾನ್ ಪಿ ಗುರುದಾಸ್ ಶೆಣೈ, ಕುಮಾರಿ ಮೇಧಾ ಭಟ್ ನೆಡೆಸಿಕೊಟ್ಟರು, ತಬಲಾ ದಲ್ಲಿ ಕಾರ್ತೀಕ ಕಾಮತ್ , ಶ್ರೀವತ್ಸ ಶರ್ಮಾ , ತಾಳ ದಲ್ಲಿ ಗುರುದತ್ತ ಕಾಮತ್, ಅಜೇಯ ಕಾಮತ್ ಸಹಕರಿಸಿದರು, ಕಲಾವಿದರನ್ನು ದೇವಳದ ವತಿಯಿಂದ ಗೌರವಿಸಲಾಯಿತು .