ಹಾಸನ: ಮಾಜಿ ಸಂಸದ, ಅತ್ಯಾಚಾರ ಆರೋಪದಲ್ಲಿ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಬಳಿ 15 ಸಿಮ್‌ಗಳು ಇದ್ದವಂತೆ. ಒಂದು ನಂಬರ್‌ನಿಂದ ಬ್ಲಾಕ್ ಮಾಡಿದರೆ ಇನ್ನೊಂದು ನಂಬರ್‌ನಿಂದ ಕಾಲ್ ಮಾಡಿ ಮಹಿಳೆಯರನ್ನು ಪ್ರಜ್ವಲ್ ರೇವಣ್ಣ ಸತಾಯಿಸುತ್ತಿದ್ದನೆಂಬ ಮಾಹಿತಿ ಲಭ್ಯವಾಗಿದೆ.
ಕೆಲವು ಪರಿಚಿತರ ಪತ್ನಿಯರೇ ಪ್ರಜ್ವಲ್‌ಗೆ ಟಾರ್ಗೆಟ್. ಕೆಲಸ ಕೇಳಿಕೊಂಡು, ಮಕ್ಕಳಿಗೆ ಸೀಟು ಕೇಳಿಕೊಂಡು ಬರುವವರ ಮೇಲೂ ಪ್ರಜ್ವಲ್ ಕಣ್ಣು ಹಾಕಿದ್ದನೆನ್ನಲಾಗಿದೆ. ಅವರ ಬಳಿ ಫೋನ್ ನಂಬರ್ ಪಡೆದು ಪದೇಪದೇ ಕರೆ ಮಾಡುತ್ತಿದ್ದ. ನಂತರ ಕ್ರಮೇಣ ಸಲುಗೆ ಬೆಳೆಸಿ, ವಿಡಿಯೋ ಕಾಲ್ ಮಾಡಿ ಬೆತ್ತಲಾಗುವಂತೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ನನ್ನೊಂದಿಗೆ ಸಹಕರಿಸದಿದ್ದರೆ ಫೋಟೊ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನೆಂದೂ ತಿಳಿದುಬಂದಿದೆ. ಬೆದರಿಕೆಗೆ ಹೆದರಿ ನಗ್ನರಾಗಿರುವುದಾಗಿ ಸಂತ್ರಸ್ತೆಯೊಬ್ಬರು ಕೊಟ್ಟ ದೂರಿನಲ್ಲಿ ಆಪಾದಿಸಿದ್ದಾರೆ.