ಬೆಂಗಳೂರು: ಲೈಂಗಿಕ ದೌರ್ಜನ್ಯ ದ ಆರೋಪ ಹೊತ್ತು ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಸಂಸದ ಪ್ರಜ್ವಲ್ ರೇವಣ್ಣ ಶುಕ್ರವಾರ ಸ್ವದೇಶಕ್ಕೆ ಮರಳುವುದು ದೃಢಪಟ್ಟಿದೆ. ಭಾರತಕ್ಕೆ ಮರಳಲು ಪ್ರಜ್ವಲ್ ರೇವಣ್ಣ ಮ್ಯೂನಿಕ್ ನಿಂದ ಬೆಂಗಳೂರಿಗೆ ಟಿಕೆಟ್ ಬುಕ್ ಮಾಡಿರುವುದು ಗೊತ್ತಾಗಿದೆ. ಮೇ 31ರ ಮಧ್ಯರಾತ್ರಿ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬರುತ್ತಿದ್ದಂತೆ ಏರ್ ಪೋರ್ಟ್ ನಲ್ಲೇ ಬಂಧನವಾಗುವ ಸಾಧ್ಯತೆಯಿದೆ.
ಲುಫ್ತಾನ್ಸಾ ಏರ್ ಲೈನ್ಸ್ ನಲ್ಲಿ ಪ್ರಜ್ವಲ್ ಟಿಕೆಟ್ ಬುಕ್ ಮಾಡಿದ್ದಾರೆ. ಏರ್ ಪೋರ್ಟ್ ನಲ್ಲೇ ಪ್ರಜ್ವಲ್ ಬಂಧಿಸಲು ಎಸ್ ಐಟಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಸೋಮವಾರವಷ್ಟೇ ವಿಡಿಯೋ ಹೇಳಿಕೆ ನೀಡಿ ಶುಕ್ರವಾರ ಬೆಳಿಗ್ಗೆ ಎಸ್ ಐಟಿ ಮುಂದೆ ಹಾಜರಾಗುವುದಾಗಿ ತಿಳಿಸಿದ್ದರು. ಅಲ್ಲದೆ ಕುಟುಂಬಸ್ಥರು, ರಾಜ್ಯದ ಜನತೆಯ ಕ್ಷಮೆ ಕೇಳಿದ್ದರು.